ಅನುಮತಿಯಿಲ್ಲದೆ ಇತರರ ಫೋಟೋ, ವೀಡಿಯೋ ಬಳಕೆಗೆ ನಿರ್ಬಂಧ ಹೇರಿದ ಟ್ವಿಟರ್

Update: 2021-12-01 11:21 GMT

ಹೊಸದಿಲ್ಲಿ: ಟ್ವಿಟರ್ ಮಂಗಳವಾರ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಇತರ ಜನರ ಖಾಸಗಿ ಇಮೇಜ್‍ಗಳನ್ನು ಅವರ ಅನುಮತಿಯಿಲ್ಲದ ಬಳಕೆದಾರರಿಗೆ ಬಳಸುವುದರಿಂದ ನಿರ್ಬಂಧ ಹೇರಿದೆ. ಟ್ವಿಟರ್ ನ ಹೊಸ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರವಾಲ್ ನೇಮಕಗೊಳ್ಳುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.

ಹೊಸ ನಿಯಮಗಳ ಪ್ರಕಾರ, ಸಾರ್ವಜನಿಕ ವ್ಯಕ್ತಿಗಳಲ್ಲದ ಜನರು ತಮ್ಮ ಅನುಮತಿಯಿಲ್ಲದೆ ಇತರರು ಪೋಸ್ಟ್ ಮಾಡಿದ ತಮ್ಮ ಚಿತ್ರಗಳು ಹಾಗೂ ವೀಡಿಯೋಗಳನ್ನು ಡಿಲೀಟ್ ಮಾಡಲು ಟ್ವಿಟರ್ ಅನ್ನು ಕೇಳಿಕೊಳ್ಳಬಹುದಾಗಿದೆ.

ಆದರೆ ತನ್ನ ಹೊಸ ನಿಯಮವು ಸಾರ್ವಜನಿಕ ವ್ಯಕ್ತಿಗಳಿಗೆ ಅನ್ವಯವಾಗುವುದಿಲ್ಲ ಅಥವಾ ಮಾಧ್ಯಮಗಳ ಮತ್ತು ಸಂಬಂಧಿತ ಟ್ವೀಟ್ ಅನ್ನು  ಸಾರ್ವಜನಿಕ ಹಿತಾಸಕ್ತಿಯಿಂದ ಶೇರ್ ಮಾಡಿದಾಗ ಅನ್ವಯವಾಗುವುದಿಲ್ಲ ಎಂದು ಟ್ವಿಟರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News