ಅಮೆಮಾರ್: ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ಮತ್ತು ಝೆಡ್.ಎಫ್.ಸಿ ಸ್ಪೋಟ್ಸ್ ಕ್ಲಬ್ ಅಧ್ಯಕ್ಷರಾಗಿ ಎಫ್. ಅಬ್ಬಾಸ್ ಆಯ್ಕೆ

Update: 2021-12-02 06:00 GMT
ಎಫ್.ಅಬ್ಬಾಸ್

ಫರಂಗಿಪೇಟೆ, ಡಿ.2: ಅಮೆಮಾರ್ ನ ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ಮತ್ತು ಝೆಡ್.ಎಫ್.ಸಿ. ಇದರ ಜಂಟಿ ಸಭೆಯು ತಂಡದ ನಾಯಕ ಇಮ್ರಾನ್ ಸಮ್ಮುಖದಲ್ಲಿ ಬುಧವಾರ ಅಮೆಮಾರ್ ನಲ್ಲಿ ನಡೆಯಿತು.

ಸಭೆಯಲ್ಲಿ ನೂತನವಾಗಿ ಸಮಿತಿ ರಚನೆ ಮಾಡಲಾಯಿತು.

ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ಅಧ್ಯಕ್ಷರಾಗಿ ಎಫ್.ಅಬ್ಬಾಸ್, ಗೌರವಾಧ್ಯಕ್ಷರಾಗಿ ಎಂ.ಎಸ್.ಸಿದ್ದೀಕ್, ಉಪಾಧ್ಯಕ್ಷರಾಗಿ ಸಿ. ಎಚ್.ಮನ್ಸೂರು, ಕಾರ್ಯದರ್ಶಿಯಾಗಿ ಹೈದರ್, ಕೋಶಾಧಿಕಾರಿಯಾಗಿ ಸಿ.ಎಚ್.ಅಶ್ರಫ್, ಸಲಹೆಗಾರರಾಗಿ ಬಶೀರ್ ತಂಡೇಲ್, ಸುಲೈಮಾನ್ ಉಸ್ತಾದ್, ಸದಸ್ಯರಾಗಿ ಉಮರಬ್ಬ ವಳಚ್ಚಿಲ್, ಅಬೂಬಕರ್, ಶಬೀರ್ ತಂಡೇಲ್, ಹಕೀಂ ಚೆಲ್ಲಿ ಮತ್ತು ತಂಡದ ಮ್ಯಾನೇಜರಾಗಿ ಹನೀಫ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News