'ಸಮಸ್ತ' ಅಧ್ಯಕ್ಷರಿಂದ ಶಂಸುಲ್ ಉಲಮಾ ಟ್ರಸ್ಟ್ ಗೆ ಅನುಮತಿ ಪತ್ರ ಹಸ್ತಾಂತರ

Update: 2021-12-02 06:48 GMT

ಕಲ್ಲೆಕೋಟೆ, ಡಿ.1: ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಕಮಿಟಿ  ಖುತುಬಿಯಾ ಜುಮಾ ಮಸೀದಿ ಆಶ್ರಯದಲ್ಲಿ ಕಾರ್ಯಚರಿಸುತ್ತಿರುವ ಕೆಮ್ಮಾರ ಶಕ್ತಿನಗರ ಹಿದಾಯತುಲ್ ಇಸ್ಲಾಂ ಮದ್ರಸ ಮತ್ತು ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜ್ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ದಿಪಡಿಸುವ ಉದ್ದೇಶದಿಂದ ಇತ್ತೀಚೆಗೆ ಆಸ್ತಿತ್ವಕ್ಕೆ ತರಲಾದ ಶಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ಗೆ ವಹಿಸಿಕೊಡಲಾಗಿದೆ.  ನೂತನ ಸಮಿತಿಗೆ ಸಂಸ್ಥೆಯನ್ನು ಮುನ್ನಡೆಸುವ ಅನುಮತಿ ಪತ್ರವನ್ನು ಕಲ್ಲಿಕೋಟೆ ಸಮಸ್ತ ಕೇಂದ್ರ  ಕಚೇರಿಯಲ್ಲಿ ಶೈಖುನಾ ಸೈಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಟ್ರಸ್ಟ್ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಬಳಿಕ ಮಾತಾಡಿದ ತಂಙಳ್, ಈ ಸಂಸ್ಥೆ ಉತ್ತಮವಾಗಿ ಬೆಳೆದು ಶೈಕ್ಷಣಿಕವಾಗಿ ಉತ್ತರೋತ್ತರ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ದಾರಿಮಿ, ಸಂಚಾಲಕ ಅಬ್ದುಲ್ ರಶೀದ್ ಹಾಜಿ, ಜಮಾಅತ್ ಸಮಿತಿ ಸದಸ್ಯರಾದ ಹುಸೈನ್ ಬಡಿಲ, ಎನ್.ಎ.ಇಸಾಕ್, ಕೋಶಾಧಿಕಾರಿ ಹಸೈನಾರ್ ಹಾಜಿ, ಉಪಾದ್ಯಕ್ಷ ಜಿ.ಮುಹಮ್ಮದ್ ರಪೀಕ್ ಹಾಜಿ, ಜೊತೆ ಕಾರ್ಯದರ್ಶಿಗಳಾದ ಅಬ್ದುಲ್  ರಝಾಕ್ ಮರ್ವೇಲ್, ಜಿಎಂಆರ್ ರಝಾಕ್, ಸದಸ್ಯರಾದ ಜಿ.ಇಸ್ಮಾಯೀಲ್, ಕಲಂದರ್ ಎಸ್.ಪಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News