ಡಿ.5: ಕಟ್ಟಡ ಕಾರ್ಮಿಕರ ನೋಂದಣಿ ಶಿಬಿರ

Update: 2021-12-02 14:31 GMT

ಉಡುಪಿ, ಡಿ.2: ನಗರದ ಬೀಡಿನಗುಡ್ಡೆ ವ್ಯಾಪ್ತಿಯ ವಲಸೆ ಕಾರ್ಮಿಕರ ಕಾಲೋನಿಯಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲಾನುಭವಿಗಳನ್ನಾಗಿ ನೋಂದಾಯಿಸುವ ಸಲುವಾಗಿ ಡಿ. 5ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ಯವರೆಗೆ ಬೀಡಿನಗುಡ್ಡೆ ಮಂಡಳಿಯ ಶಿಶುಪಾಲನಾ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಶಿಬಿರವನ್ನು ಆಯೋಜಿಸಲಾಗುವುದು.

ಶಿಬಿರದಲ್ಲಿ ಕೇಂದ್ರ ಸರಕಾರದ ಇ-ಶ್ರಮ್ ಕಾರ್ಡ್, ಪಿ.ಎಂ.ಎಸ್.ವೈ.ಎಂ ಕಾರ್ಡ್, ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಕಾರ್ಡ್, ವಾಣಿಜ್ಯ ವಾಹನಗಳ ಕ್ಲೀನರ್ ಮತ್ತು ನಿರ್ವಾಹಕರಿಗೂ ಅನ್ವಯವಾಗುವ ಯೋಜನೆ ಯಡಿ ನೋಂದಣಿ ಮಾಡಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗುವುದು.

ಈವರೆಗೆ ನೋಂದಣಿ ಆಗದೆ ಇರುವ 18ರಿಂದ 60 ವರ್ಷದೊಳಗಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ 16ರಿಂದ 59 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮೂಲ ಆಧಾರ್‌ ಕಾರ್ಡ್, ಮೂಲ ಬ್ಯಾಂಕ್‌ ಪಾಸ್ ಪುಸ್ತಕ ಹಾಗೂ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವ ಮೊಬೈಲ್ ನಂಬರ್‌ನೊಂದಿಗೆ ಶಿಬಿರ ದಲ್ಲಿ ಭಾಗವಹಿಸಿ, ಈ ನೋಂದಣಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News