ಕಾಡುಪೊದೆಯಲ್ಲಿ ಎಸೆಯಲ್ಪಟ್ಟ ನವಜಾತ ಹೆಣ್ಣು ಶಿಶುವಿನ ರಕ್ಷಣೆ

Update: 2021-12-02 14:52 GMT

ಅಮಾಸೆಬೈಲು, ಡಿ.2: ಮಚ್ಚಟ್ಟು ಸಣ್ಣ ಸೇತುವೆ ಬಳಿ ರಸ್ತೆಯ ಬದಿಯ ಕಾಡು ಪೊದೆಯಲ್ಲಿ ಎಸೆದು ಹೋದ ನವಜಾತ ಹೆಣ್ಣು ಶಿಶುವೊಂದು ಡಿ.1ರಂದು ಸಂಜೆ 4.30ರ ಸುಮಾರಿಗೆ ಪತ್ತೆಯಾಗಿದೆ.

ಮಚ್ಚಟ್ಟು ಮಡಿವಾಳಕಟ್ಟುವಿನ ಗೀತಾ ಎಂಬವರು ಹಾಲು ಡೈರಿಗೆ ಹೋಗುತ್ತಿದ್ದಾಗ ಪೊದೆಯ ಒಳಗೆ ಮಗು ಅಳುವ ಧ್ವನಿ ಕೇಳಿಸಿತ್ತೆನ್ನಲಾಗಿದೆ. ಹಾಗೆ ಪೊದೆ ಬಳಿ ಹೋಗಿ ನೋಡಿದಾಗ ಸುಮಾರು 7 ದಿನಗಳ ನವಜಾತ ಹೆಣ್ಣು ಶಿಶು ಕಂಡುಬಂದಿದೆ.

ಈ ಮಗುವನ್ನು ಹಡೆದಿರುವ ಪೋಷಕರು, ಮಗುವಿನ ಪಾಲನೆ ಪೋಷಣೆ ಮಾಡದೆ ಮಗುವನ್ನು ಅಪಾಯಕ್ಕೊಡ್ಡುವ ಉದ್ದೇಶದಿಂದ ರಸ್ತೆ ಬದಿ ಕಾಡು ಪೊದೆಯಲ್ಲಿ ಅಪಾಯಕರ ಸ್ಥಿತಿಯಲ್ಲಿ ಎಸೆದುಹೋಗಿರುವುದಾಗಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮಗುವನ್ನು ಹಡೆದಿರುವ ಪೋಷಕರು, ಮಗುವಿನ ಪಾಲನೆ ಪೋಷಣೆ ಮಾಡದೆ ಮಗುವನ್ನು ಅಪಾಯಕ್ಕೊಡ್ಡುವ ಉದ್ದೇಶದಿಂದ ರಸ್ತೆ ಬದಿ ಕಾಡು ಪೊದೆಯಲ್ಲಿ ಅಪಾಯಕರ ಸ್ಥಿತಿಯಲ್ಲಿ ಎಸೆದುಹೋಗಿರುವುದಾಗಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಅಮಾಸೆಬೈಲು ಎಸ್ಸೈ ಸುಬ್ಬಣ್ಣ ಹಾಗೂ ಸಿಬ್ಬಂದಿಗಳಿಗೆ ಹಸ್ತಾಂತರಿ ಸಿದ್ದು ಅಧಿಕಾರಿಗಳು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News