ಡಿ.3: ವಿದ್ಯುತ್ ವ್ಯತ್ಯಯ

Update: 2021-12-02 15:25 GMT

ಮಂಗಳೂರು, ಡಿ.2: ನಗರದ ಕದ್ರಿ ಉಪಕೇಂದ್ರದಿಂದ ಹೊರಡುವ ಕರಂಗಾಲ್ಪಾಡಿ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಯ ಹಿನ್ನಲೆಯಲ್ಲಿ ಡಿ.3ರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವ್ಯಾಸರಾವ್ ರೋಡ್, ಪಿಂಟೋಸ್ ಲೇನ್, ವಿನಯ ನರ್ಸಿಂಗ್ ಹೋಂ, ಶ್ರಿದೇವಿ ನರ್ಸಿಂಗ್ ಹೋಂ, ಕರಂಗಲ್ಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ನಗರದ ಅಳಕೆ ಉಪಕೇಂದ್ರದಿಂದ ಹೊರಡುವ ಪ್ರಗತಿನಗರ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಓಎಸ್ ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ಡಿ.3ರ ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಪಾಸ್‌ಪೋರ್ಟ್ ಕಚೇರಿ, ಕೋಡಿಯಾಲ್ಬೈಲ್, ಕೆನರಾ ಹೈಸ್ಕೂಲ್ ಹಿಂದುಗಡೆ, ಡೊಂಗರಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

*ನಗರದ ಕುಲಶೇಖರ ಉಪಕೇಂದ್ರದ ಶಕ್ತಿ ಪರಿವರ್ತಕ-1 ರಲ್ಲಿ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಡಿ.3ರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಪಂಪ್‌ವೆಲ್, ಕಣ್ಣೂರು, ನೀರುಮಾರ್ಗ, ಪದವು, ಎಕ್ಕೂರು, ಶಕ್ತಿನಗರ, ಕೆನರಾ ವರ್ಕ್‌ಶಾಪ್, ಅಡ್ಯಾರ್, ಕುಡುಪು ಮತ್ತು ನಂತೂರು, ಮರೋಳಿ, ನಾಗುರಿ, ಗರೋಡಿ, ಕಪಿತಾನಿಯೋ, ಉಜ್ಜೋಡಿ, ಕುಲಶೇಖರ, ಸರಿಪಳ್ಳ, ದರ್ಬಾರ್ ಗುಡ್ಡೆ, ಜಲ್ಲಿಗುಡ್ಡೆ, ವೀರನಗರ, ಪಕಲಡ್ಕ, ಬಜಾಲ್, ಜೆಪ್ಪಿನಮೊಗರು, ಎಕ್ಕೂರುಗುಡ್ಡೆ, ಯೆಯ್ಯೆಡಿ, ಬಿಕರ್ನಕಟ್ಟೆ, ಇಂಡಸ್ಟ್ರಿಯಲ್ ಏರಿಯಾ, ಪಡೀಲ್ ಓವರ್ ಬ್ರಿಡ್ಜ್, ಅಡ್ಯಾರ್, ವಳಚ್ಚಿಲ್, ಅರ್ಕುಳ, ಮೇರ್ಲಪದವು, ನೀರುಮಾರ್ಗ, ಮಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News