ಡಿ.4ರಂದು ಕಬಕ ಜುಮಾ ಮಸೀದಿಯಲ್ಲಿ ಜಲಾಲಿಯತ್ ರಾತಿಬ್

Update: 2021-12-02 15:45 GMT

ವಿಟ್ಲ :  ಕಬಕ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಜಲಾಲಿಯತ್ ರಾತಿಬ್ ಡಿ.4 ರಂದು ರಾತ್ರಿ 8ಕ್ಕೆ ನಡೆಯಲಿದೆ.

ಸಯ್ಯಿದ್ ಕೆ.ಎಸ್.ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್  ಜಲಾಲಿಯತ್ ರಾತಿಬ್ ನ ನೇತೃತ್ವ ವಹಿಸಲಿದ್ದಾರೆ.

ಡಿ.3ರಂದು ರಾತ್ರಿ ಧಾರ್ಮಿಕ ಪ್ರವಚನ ನಡೆಯಲಿದ್ದು  ಕಬಕ ಜುಮಾ ಮಸೀದಿ ಅಧ್ಯಕ್ಷ ಸಿತಾರ್ ಇಬ್ರಾಹಿಂ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ದು:ಹಾ ನೆರವೇರಿಸುವರು.  ಕಾಸರಗೋಡು ಮೇಲ್ಪರಂಬ್ ಖತೀಬ್ ಬಹು. ಅಶ್ರಫ್ ರಹ್ಮಾನಿ ಚೌಕಿ ಧಾರ್ಮಿಕ ಪ್ರವಚನಗೈಯುವರು. ಡಿ.4 ರಂದು ಮಗ್ರಿಬ್ ನಮಾಝ್ ಬಳಿಕ ಕೂಟ್ ಝಿಯಾರತ್ ಬಳಿಕ ಜಲಾಲಿಯತ್ ರಾತೀಬ್ ನಡೆಯಲಿದೆ ಎಂದು ಕಬಕ ಜುಮಾ ಮಸೀದಿಯ ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News