ಶಂಸುಲ್ ಉಲಮಾ ಟ್ರಸ್ಟ್ ಗೆ ಅನುಮತಿ ಪತ್ರ ಹಸ್ತಾಂತರ

Update: 2021-12-02 15:47 GMT

ಪುತ್ತೂರು: ಹಿಮಾಯತುಲ್ ಇಸ್ಲಾಂ ಕಮಿಟಿ  ಖುತುಬಿಯಾ ಜುಮಾ ಮಸೀದಿ ಗಂಡಿಬಾಗಿಲು ಇದರ ಆಶ್ರಯದಲ್ಲಿ ಕಾರ್ಯಾಚರಿಸುತ್ತಿದ್ದ ಕೆಮ್ಮಾರ ಶಕ್ತಿನಗರ ಹಿದಾಯತುಲ್ ಇಸ್ಲಾಂ ಮದ್ರಸ ಮತ್ತು ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜ್ ಸಂಸ್ಥೆಯನ್ನು  ಮತ್ತಷ್ಟು ಅಭಿವೃದ್ಧಿ ಪಡಿಸುವ ಸಲುವಾಗಿ ಇತ್ತೀಚೆಗೆ ಆಸ್ತಿತ್ವಕ್ಕೆ ತರಲಾದ  ಶಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ಗೆ ವಹಿಸಿಕೊಡಲಾಗಿದ್ದು,  ನೂತನ ಸಮಿತಿಗೆ ಸಂಸ್ಥೆಯನ್ನು ಮುನ್ನಡೆಸುವ  ಅನುಮತಿ ಪತ್ರವನ್ನು ಕಲ್ಲಿಕೋಟೆ  ಸಮಸ್ತ ಕೇಂದ್ರ  ಕಚೇರಿಯಲ್ಲಿ ಪುತ್ತೂರಿನ ಸಂಯುಕ್ತ ಖಾಝಿ  ಶೈಖುನಾ ಸಯ್ಯಿದುಲ್ ಉಲಮಾ ಜಿಪ್ರಿ ಮುತ್ತುಕೋಯ ತಙಳ್ ಟ್ರಸ್ಟ್ ನ ಪದಾಧಿಕಾರಿಗಳಿಗೆ  ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಸ್ ಬಿ ಮುಹಮ್ಮದ್ ದಾರಿಮಿ, ಅಬ್ದುಲ್ ರಶೀದ್ ಹಾಜಿ , ಹುಸೈನ್ ಬಡಿಲ, ಎನ್ಎ ಇಸಾಕ್, ಹಸೈನಾರ್ ಹಾಜಿ, ಜಿ  ಮುಹಮ್ಮದ್ ರಪೀಕ್ ಹಾಜಿ,  ಅಬ್ದುಲ್  ರಝಾಕ್ ಮರ್ವೇಲ್, ಜಿಎಂಆರ್ ರಝಾಕ್, ಜಿ ಇಸ್ಮಾಯಿಲ್, ಕಲಂದರ್ ಎಸ್ ಪಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News