ಒಮಿಕ್ರಾನ್ ಸೋಂಕು ಭೀತಿ : ವಿದೇಶದಿಂದ ಬಂದಿದ್ದ ನಾಲ್ವರ ಪರೀಕ್ಷಾ ವರದಿ ನೆಗೆಟಿವ್

Update: 2021-12-03 01:50 GMT

ಮಂಗಳೂರು, ಡಿ 2: ಒಮಿಕ್ರಾನ್ ಸೋಂಕು ಪತ್ತೆಯಾಗಿರುವ ವಿದೇಶಗಳಿಂದ ಕಳೆದ ಎರಡು ವಾರಗಳಲ್ಲಿ ಮಂಗಳೂರಿಗೆ ಬಂದಿಳಿದಿದ್ದ ನಾಲ್ವರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಆಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.

ಇಟಲಿ, ಬೆಲ್ಜಿಯಂ, ಲಂಡನ್, ಪ್ಯಾರಿಸ್‌ನಿಂದ ಕಳೆದ ಎರಡು ವಾರದಲ್ಲಿ ಬಂದ ನಾಲ್ಕು ಮಂದಿಯ ಪರೀಕ್ಷೆ ಮಾಡಲಾಗಿದೆ. ಆದರೆ ಎಲ್ಲರ ವರದಿಯು ನೆಗೆಟಿವ್ ಆಗಿದೆ. ಒಮಿಕ್ರಾನ್ ಹಿನ್ನೆಲೆಯಲ್ಲಿ ಸರ್ವೇಕ್ಷಣೆ ಹೆಚ್ಚಿಸಲಾಗಿದೆ. ಅಂದರೆ ಕೋವಿಡ್ ಪಾಸಿಟಿವ್‌ನ 50 ಪ್ರಕರಣಗಳಲ್ಲಿ ಒಂದು ಮಾದರಿಯನ್ನು ಜೆನೋಮಿಕ್ ಸೀಕ್ವೆನ್ಸ್‌ಗಾಗಿ ಬೆಂಗಳೂರಿನ ನಿಮ್ಹಾನ್ಸ್ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಈ ಮಧ್ಯೆ ಜಿಲ್ಲಾದ್ಯಂತ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಕೂಡಾ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News