ನರಿಕೊಂಬು: ಮನೆಯಂಗಳಕ್ಕೆ ಬಂದ ಚಿರತೆ !

Update: 2021-12-03 05:13 GMT

ಬಂಟ್ವಾಳ, ಡಿ.3: ನರಿಕೊಂಬು ಗ್ರಾಮದ ನಿರ್ಮಲ್  ಎಂಬಲ್ಲಿ ರಾತ್ರಿ ವೇಳೆ  ಚಿರತೆಯೊಂದು ಮನೆಯ ಆವರಣಕ್ಕೆ ಬಂದು ಹೋಗುವ ದೃಶ್ಯವೊಂದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಡಿ.2ರಂದು ಮುಂಜಾವ 2 ಗಂಟೆ ಸುಮಾರಿಗೆ ನಿರ್ಮಲ್ ನಿವಾಸಿ ಜಯಂತ್ ನಿರ್ಮಲ್ ಮನೆಯ ಅಂಗಳಕ್ಕೆ ಚಿರತೆಯೊಂದು ನುಗ್ಗಿದೆ. ಬಳಿಕ ಯಾವುದೋ ಶಬ್ದ ಕೇಳಿಸಿದ್ದರಿಂದ ಚಿರತೆ ಅಲ್ಲಿಂದ ಓಡಿ ಹೋಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಕುರಿತು ನರಿಕೊಂಬು ಗ್ರಾಪಂಗೆ ಮಾಹಿತಿ ನೀಡಿರುವುದಾಗಿ ಮನೆಯವರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News