ರಾಜ್ಯಪಾಲ ತಾವರ್ ಚಂದ್ ಗೆಹ್ಲೋತ್ ಮುರುಡೇಶ್ವರ ಭೇಟಿ

Update: 2021-12-03 15:52 GMT

ಭಟ್ಕಳ : ರಾಜ್ಯದಲ್ಲಿ ನಾಲ್ಕು ದಿನಗಳ ಧಾರ್ಮಿಕ ಪ್ರವಾದಲ್ಲಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋತ್ ತಮ್ಮ ಕುಟುಂಬ ಸಮೇತ ಶುಕ್ರವಾರ ಭಟ್ಕಳ ತಾಲೂಕಿನ ಮುರುಡೇಶ್ವರಕ್ಕೆ ಭೇಟಿ ನೀಡಿದರು.

ಇವರ ಪ್ರವಾಸದ ವೇಳೆ ಝಡ್ ಪ್ಲಸ್ ಭದ್ರತೆ ಜೊತೆಗೆ ಜಿಲ್ಲೆಯ ಪೋಲಿಸ್ ಬಿಗಿ ಬಂದೋಬಸ್ತ ಒದಗಿಸಿದ್ದು ಮುರುಡೇಶ್ವರದಲ್ಲಿ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು.

ಮುರುಡೇಶ್ವರ ದೇವಸ್ಥಾನದಿಂದ ಮಹಾದ್ವಾರದ ತನಕ ಎರಡು ರಸ್ತೆ ಮಾರ್ಗವನ್ನು ಬಂದ್ ಮಾಡಲಾಗಿದ್ದು, ಎಲ್ಲಾ ಕಡೆ ಬ್ಯಾರಿಗೇಟ್ ಅಳವಡಿಸಲಾಗಿದೆ. ರಸ್ತೆಯುದ್ದಕ್ಕೂ ಪೋಲೀಸ್ ಸಿಬ್ಬಂದಿಗಳನ್ನು ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ನೇಮಿಸಲಾಗಿತ್ತು. ಎಲ್ಲಾ ಒಳ ಸಂಪರ್ಕ ರಸ್ತೆಗಳಿಗೂ ಬ್ಯಾರಿಗೇಟ್ ಹಾಕಲಾಗಿದ್ದು, ಸತತ ಒಂದು ಗಂಟೆಗಳ ಕಾಲ ಪ್ರವಾಸಿಗರಿಗೆ ಸಂಚಾರ ಸಿಗದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಮುರುಡೇಶ್ವರನ ದರ್ಶನ ಪಡೆಯಲು ಆಗಮಿಸಿದ ಭಕ್ತಾದಿಗಳು ಅಸಮಾಧಾನಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಡಾ. ಸುಮನ್  ಡಿ, ಪೆನ್ನೇಕೆರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪ್ರಿಯಾಂಗ್, ಭಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್. ತಹಶೀಲ್ದಾರ್ ಎಸ್ ರವಿಚಂದ್ರನ್, ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಸಿ.ಪಿ ಐ ದಿವಾಕರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News