ಕೋವಿಡ್ ಲಸಿಕೆಯಿಂದ ಏಡ್ಸ್ ತಗಲಬಹುದೆಂದ ಬ್ರೆಝಿಲ್ ಅಧ್ಯಕ್ಷರ ವಿರುದ್ಧ ತನಿಖೆಗೆ ಆದೇಶ

Update: 2021-12-04 07:04 GMT
ಜೈರ್ ಬೊಲ್ಸೊನಾರೊ (File Photo: PTI)

ಬ್ರೆಸಿಲಿಯಾ: ಕೋವಿಡ್ ಲಸಿಕೆಗಳಿಂದ ಏಡ್ಸ್ ತಗಲುವ ಸಾಧ್ಯತೆ ಹೆಚ್ಚಾಗಬಹುದು ಎಂದು ಅಕ್ಟೋಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವೊಂದರಲ್ಲಿ ಹೇಳಿಕೊಂಡ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರನ್ನು ತನಿಖೆಗೊಳಪಡಿಸುವಂತೆ ಬ್ರೆಜಿಲ್ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.

ಕೋವಿಡ್ ಲಸಿಕೆ ಪಡೆದುಕೊಳ್ಳಲು ನಿರಾಕರಿಸಿರುವ ಬೊಲ್ಸೊನೊರೊ ಅವರನ್ನು ಫೇಸ್ಬುಕ್ ಮತ್ತು ಯುಟ್ಯೂಬ್‌ನಿಂದ ತಾತ್ಕಾಲಿಕವಾಗಿ  ವಜಾಗೊಳಿಸಲಾಗಿದೆ.

ಸೆನೆಟ್ ತನಿಖಾ ಸಮಿತಿಯ ಮನವಿಯ ಮೇರೆಗೆ ನ್ಯಾಯಾಲಯ ಅವರನ್ನು ತನಿಖೆಗೊಳಪಡಿಸುವ ನಿರ್ಧಾರಕ್ಕೆ ಬಂದಿದೆ. ಸಿಪಿಐ ಎಂದು ಕರೆಯಲ್ಪಡುವ ಸಮಿತಿಯು ಬೊಲ್ಸೊನೊರೊ ಅವರು ಒಂಬತ್ತು  ಅಪರಾಧವೆಸಗಿದ್ದಾರೆ ಹಾಗೂ ಇವುಗಳಲ್ಲಿ ಮಾನವ ಜನಾಂಗದ ವಿರುದ್ಧದ ಅಪರಾಧಗಳೂ ಸೇರಿವೆ. ಅವರ ಸರಕಾರ ಕೋವಿಡ್ ನಿರ್ವಹಣೆ ಮಾಡಿರುವ ರೀತಿ ಈಗಾಗಲೇ ವ್ಯಾಪಕ ಟೀಕೆಗೆ ಗುರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News