ಸಿಎಎ-ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 6 ಮಂದಿಯ ವಿರುದ್ಧದ ಬಂಧನ ಆದೇಶ ರದ್ದು

Update: 2021-12-04 19:03 GMT

ಹೊಸದಿಲ್ಲಿ, ಡಿ. 4: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ 2019 ಡಿಸೆಂಬರ್ 16ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪದ ಬಳಿಕ ಉತ್ತರಪ್ರದೇಶದ ಮಉ ಜಿಲ್ಲಾಡಳಿತ ಜಾರಿಗೊಳಿಸಿದ 6 ಮಂದಿಯ ವಿರುದ್ಧದ ಬಂಧನ ಆದೇಶವನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯ ಸೆಕ್ಷನ್ 10ರ ಆದೇಶದ ಪ್ರಕಾರ ಸರಕಾರ ಮೂರು ವಾರಗಳಲ್ಲಿ ಅಗತ್ಯ ಇರುವ ಎಲ್ಲ ದಾಖಲೆಗಳನ್ನು ಕಳುಹಿಸಿಕೊಡಬೇಕು. ಆದರೆ, ಈ ಪ್ರಕರಣದಲ್ಲಿ ಮೂರು ವಾರಗಳ ಅವಧಿ ಕಳೆದ ಬಳಿಕ ಸೆಪ್ಟಂಬರ್ 28ರಂದು ಅದು ದಾಖಲೆಗಳನ್ನು ಸಲಹಾ ಮಂಡಳಿಗೆ ಕಳುಹಿಸಿ ಕೊಟ್ಟಿದೆ ಎಂದು ನ್ಯಾಯಮೂರ್ತಿಗಳಾದ ಸುನಿತಾ ಅಗರ್ವಾಲ್ ಹಾಗೂ ಸಾಧ್ನಾ ರಾಣಿ (ಠಾಕೂರ್) ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.

ವಿಳಂಬದ ಹಿನ್ನೆಲೆಯಲ್ಲಿ ಬಂಧನ ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ.

ಮಉ ಜಿಲ್ಲಾಡಳಿತ ಆರು ಮಂದಿಯ ವಿರುದ್ಧ ಬಂಧನ ಆದೇಶ ಜಾರಿಗೊಳಿಸಿತ್ತು. ಈ ಬಂಧನ ಆದೇಶವನ್ನು ರದ್ದುಗೊಳಿಸುವಂತೆ ಕೋರಿ 6 ಮಂದಿ ಹೆಬಿಯಸ್ ಕಾರ್ಪಸ್ ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News