ದ.ಕೊರಿಯ: ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ‌ಏರಿಕೆ

Update: 2021-12-05 01:52 GMT

ಸೋಲ್ (ದ.ಕೊರಿಯ),ಡಿ.4: ದಕ್ಷಿಣ ಕೊರಿಯದಲ್ಲಿ ಹೊಸ ಕೋವಿಡ್19 ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ತನೇ ಏರಿಕೆ ಕಂಡಿದ್ದು, ಶನಿವಾರ 5352 ಪ್ರಕರಣಗಳು ವರದಿಯಾಗಿವೆ ಹಾಗೂ 70 ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ ದ.ಕೊರಿಯದಲ್ಲಿ ಒಮೈಕ್ರಾನ್ ಪ್ರಭೇದದ ಕೊರೋನ ವೈರಸ್ ಸೋಂಕಿನ 9 ಪ್ರಕರಣಗಳು ದೃಢಪಟ್ಚಿರುವುದಾಗಿ ಕೊರಿಯ ರೋಗ ನಿಯಂತ್ರಣ ಹಾಗೂ ತಡೆ ಏಜೆನ್ಸಿ ಶನಿವಾರ ತಿಳಿಸಿದೆ.

ರೆಸ್ಟಾರೆಂಟ್‌ಗಳು, ಚಿತ್ರಮಂದಿರಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಭೇಟಿ ನೀಡುವ ಜನರು ತಾವು ಲಸಿಕೆಯನ್ನು ಪಡೆದ ಪ್ರಮಾಣತ್ರವನ್ನು ತೋರಿಸಬೇಕಾಗುತತದೆ ಎಂದು ದ.ಕೊರಿಯ ಸರಕಾರವು ಶುಕ್ರವಾರ ಘೋಷಿಸಿದೆ. ಸಿಯೋಲ್ ಬೃಹನ್ನಗರ ಪ್ರದೇಶದಲ್ಲಿ ಖಾಸಗಿ ಸಭೆ, ಸಮಾರಂಭಗಳಿಗೆ ಗರಿಷ್ಠ ಜನರ ಮಿತಿಯನ್ನು 10ರಿಂದ 56ಕ್ಕೆ ಇಳಿಸಿದೆ. ರಾಜಧಾನಿಯ ಹೊರಗಿನ ಪ್ರದೇಶಗಳ 12 ಜನರ ಮಿತಿಯನ್ನು ವಿಧಿಸಿದೆ.

ಈ ಮಧ್ಯೆ ದ.ಕೊರಿಯದಲ್ಲಿ ಕೋವಿಡ್19ನ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಗುರುವಾರ ಗಂಭೀರ ಹಾಗೂ ಚಿಂತಾಜನಕವಾದದ ಸ್ಥಿತಿಯಲ್ಲಿ 752 ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಕೆಡಿಸಿಎ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News