ಮಾಲಿ: ಉಗ್ರರ ದಾಳಿಗೆ ಕನಿಷ್ಠ 31 ಬಲಿ

Update: 2021-12-05 01:56 GMT

ಬ್ಯಾಮಾಕೊ, ಡಿ.4: ಕೇಂದ್ರ ಮಾಲಿಯಲ್ಲಿ ಶುಕ್ರವಾರ ಸ್ಥಳೀಯ ಮಾರುಕಟ್ಟೆಗೆ ಜನರನ್ನು ಕೊಂಡೊಯ್ಯುತ್ತಿದ್ದ ಬಸ್ಸೊಂದರ ಮೇಲೆ ಉಗ್ರರು ಮನಬಂದಂತೆ ಗುಂಡು ಹಾರಿಸಿ ಕನಿಷ್ಠ 31 ಮಂದಿಯನ್ನು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.

ಮೃತಪಟ್ಟವರಲ್ಲಿ ಹೆಚ್ಚಿನವರು ಸೊಂಗೊ ಗ್ರಾಮದ ನಿವಾಸಿಗಳಾಗಿದ್ದು ಅವರು 10 ಕಿ.ಮೀ. ದೂರದಲ್ಲಿರುವ ಬಂಡಿಯಾಗಾರಾ ಮಾರುಕಟ್ಟೆಗೆ ಬಸ್‌ನಲ್ಲಿ ಬರುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದಾರೆ ಎಂದು ಸಮೀಪದ ಬಂಕಾಸ್ ನಗರದ ಮೇಯರ್ ವೌಲಾಯೆ ಗುಯಿಂಡೊ ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲಿ 31 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಫ್ರಿಕಾ ಖಂಡದ ಸಹೇಲ್ ಪ್ರಾಂತದಲ್ಲಿರುವ ದೇಶಗಳಾದ ಮಾಲಿ, ಬುರ್ಕಿನಾಫಾಸೊ ಹಾಗೂ ನೈಜರ್ ವಿವಿಧೆಡೆ ಬಂಡುಕೋರ ಗುಂಪುಗಳು ನಡೆಸಿದ ದಾಳಿಗಳಲ್ಲಿ ಈವರೆಗೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಲಕ್ಷಾಂತರ ಮಂದಿ ಸ್ಥಳಾಂತರಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News