ಒಮೈಕ್ರಾನ್ ಆತಂಕ:ವಿಮಾನ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷಾ ವರದಿ ಕಡ್ಡಾಯಗೊಳಿಸಿದ ಅಮೆರಿಕ

Update: 2021-12-05 06:52 GMT

ವಾಷಿಂಗ್ಟನ್: ಹೊಸ ಒಮೈಕ್ರಾನ್ ರೂಪಾಂತರದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆ ಭಾರತ ಸೇರಿದಂತೆ ಎಲ್ಲಾದೇಶಗಳಿಂದ ಒಳಬರುವ ಪ್ರಯಾಣಿಕರು ನೆಗೆಟಿವ್ ಕೋವಿಡ್-19 ಪರೀಕ್ಷಾ ವರದಿ ಅಥವಾ ಸಾಂಕ್ರಾಮಿಕದಿಂದ ಚೇತರಿಸಿಕೊಂಡ ಪುರಾವೆಯನ್ನು ಒಯ್ಯುವುದನ್ನು ಅಮೆರಿಕ ಕಡ್ಡಾಯಗೊಳಿಸಿದೆ.

ಹೊಸ ಪ್ರೋಟೋಕಾಲ್ ಡಿಸೆಂಬರ್ 6 ರಿಂದ ಜಾರಿಗೆ ಬರುತ್ತದೆ ಎಂದು ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆ (ಎಚ್ ಎಚ್ಎಸ್) ನಲ್ಲಿರುವ ರೋಗ ನಿಯಂತ್ರಣ ಹಾಗೂ  ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ತಿಳಿಸಿದೆ.

"ಈ ತಿದ್ದುಪಡಿಯು ಅಮೆರಿಕಕ್ಕೆ ವಿಮಾನ ಹತ್ತುವ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಮಾನ ಪ್ರಯಾಣಿಕರಿಗೆ ಕೋವಿಡ್-19 ಪರೀಕ್ಷೆಯ ಅವಶ್ಯಕತೆಗಳನ್ನು ನವೀಕರಿಸುತ್ತದೆ" ಎಂದು ಭಾರತೀಯ ಸರಕಾರಿ ಅಧಿಕಾರಿಗಳು ಶನಿವಾರ ಭಾರತೀಯ-ಅಮೆರಿಕನ್ ಸಮುದಾಯದ ಮುಖಂಡರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News