ದುಷ್ಕರ್ಮಿಗಳಿಂದ ಶ್ರೀಲಂಕಾ ಪ್ರಜೆಯನ್ನು ರಕ್ಷಿಸಲೆತ್ನಿಸಿದ ವ್ಯಕ್ತಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ ಪಾಕ್‌ ಪ್ರಧಾನಿ

Update: 2021-12-05 14:27 GMT

ಇಸ್ಲಾಮಾಬಾದ್:‌ ಧರ್ಮನಿಂದನೆ ಆರೋಪದಲ್ಲಿ ಶ್ರೀಲಂಕಾ ಪ್ರಜೆ ಹಾಗೂ ಉದ್ಯಮಿ ಪ್ರಿಯಾಂತಾ ದಿಯವದನ ಎಂಬ ವ್ಯಕ್ತಿಯನ್ನು ಥಳಿಸಿ ಕೊಂದ ಘಟನೆ ಪಾಕಿಸ್ತಾನದ ಸಿಯಾಲ್‌ ಕೋಟ್‌ ನಲ್ಲಿ ನಡೆದಿತ್ತು. ಇಸ್ಲಾಂ ಧರ್ಮದ ಪೋಸ್ಟರ್‌ ಗಳನ್ನು ಹರಿದು ಕಸದಬುಟ್ಟಿಗೆ ಎಸೆದಿದ್ದಾನೆಂಬ ವದಂತಿಯ ಮೇರೆಗೆ ಕೃತ್ಯ ನಡೆದಿತ್ತು. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಮಾತ್ರವಲ್ಲದೇ ನೂರಕ್ಕೂ ಹೆಚ್ಚು ಮಂದಿಯನು ಬಂಧಿಸಲಾಗಿತ್ತು. ಇದೀಗ ಪ್ರಕರಣದ ಸಂದರ್ಭದಲ್ಲಿ ವ್ಯಕ್ತಿಯನ್ನು ರಕ್ಷಸಲೆತ್ನಿಸಿದ ಯುವಕನಿಗೆ ಶೌರ್ಯ ಪ್ರಶಸ್ತಿ ನೀಡುವುದಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ಅವರು, "ಸಿಯಾಲ್‌ ಕೋಟ್‌ ನಲ್ಲಿ ದುಷ್ಕರ್ಮಿಗಳಿಂದ ಪ್ರಿಯಾಂತ ದಿಯವದನಾರನ್ನು ರಕ್ಷಿಸಲು ತನ್ನ ಪ್ರಾಣವನ್ನು ಒತ್ತೆಯಿಟ್ಟು ಪ್ರಯತ್ನಿಸಿದ ಹಾಗೂ ಜನಸಮೂಹದಿಂದ ಅವರನ್ನು ರಕ್ಷಿಸಲು ತಮ್ಮಿಂದಾಗುವ ಪ್ರಯತ್ನವನ್ನು ಮಾಡಿದ ಮಲಿಕ್‌ ಅದ್ನಾನ್‌ ರ ನೈತಿಕ ಸ್ಥೈರ್ಯ, ಶೌರ್ಯಕ್ಕ ರಾಷ್ಟ್ರದ ಪರವಾಗಿ ನಾನು ಸೆಲ್ಯೂಟ್‌ ಮಾಡುತ್ತಿದ್ದೇನೆ. ಅವರಿಗೆ ತಮ್ಗಾ-ಇ-ಸುಜಾತ್‌ ಪ್ರಶಸ್ತಿಯನ್ನು ನೀಡಲಾಗುವುದು" ಎಂದು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News