ಅಫ್ಗಾನ್ ಮಾಜಿ ಅಧಿಕಾರಿಗಳ ಹತ್ಯೆ ವರದಿ: 22 ದೇಶಗಳ ಖಂಡನೆ‌

Update: 2021-12-05 18:37 GMT

ಕಾಬೂಲ್, ಡಿ.5: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ಗಳು ಮಾಜಿ ಪೊಲೀಸ್ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳ ನ್ಯಾಯಾತಿರಿಕ್ತ (ವಿಚಾರಣೆ ಇಲ್ಲದೆ ಹತ್ಯೆ) ಹತ್ಯೆ ನಡೆಸುತ್ತಿವೆ ಎಂದು ಅಮೆರಿಕ, ಯುರೋಪಿಯನ್ ಯೂನಿಯನ್ ಸಹಿತ 22 ದೇಶಗಳು ಖಂಡಿಸಿವೆ.

ಅಫ್ಗಾನ್‌ನ ರಾಷ್ಟ್ರೀಯ ಭದ್ರತಾ ಪಡೆಯ ಕನಿಷ್ಟ 47 ಸದಸ್ಯರು ಹತರಾಗಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎಂಬ ಮಾನವಹಕ್ಕು ನಿಗಾ ಸಮಿತಿಯ ವರದಿಯ ಹಿನ್ನೆಲೆಯಲ್ಲಿ ಈ ಖಂಡನೆ ವ್ಯಕ್ತವಾಗಿದೆ. ‌

ಈ ವರದಿಯಿಂದ ತೀವ್ರ ಆಘಾತವಾಗಿದೆ. ಮಾಜಿ ಅಧಿಕಾರಿಗಳಿಗೆ ಕ್ಷಮಾದಾನ ನೀಡಲಾಗುವುದು ಎಂಬ ತಾಲಿಬಾನ್‌ಗಳ ಘೋಷಣೆಗೆ ಈ ಕೃತ್ಯ ವಿರುದ್ಧವಾಗಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ . ಅಫ್ಗಾನ್ನ ಮಾಜಿ ಅಧಿಕಾರಿಗಳಿಗೆ ತಾಲಿಬಾನ್ ಕ್ಷಮಾದಾನ ಒದಗಿಸಬೇಕು. ಅಲ್ಲದೆ ಮಾನವಹಕ್ಕು ಉಲ್ಲಂಘನೆಯಾಗಿದೆ ಎಂಬ ವರದಿಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ದೇಶಗಳು ಹೇಳಿಕೆ ನೀಡಿವೆ. 

ಅಮೆರಿಕ, ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್, ಬ್ರಿಟನ್, ಉಕ್ರೇನ್ ಸಹಿತ 22 ದೇಶಗಳು ಖಂಡನೆಗೆ ಸಹಿ ಹಾಕಿವೆ. ಸುರಕ್ಷತೆಯ ಖಾತರಿ ಪಡೆಯಬೇಕಿದ್ದರೆ ಮತ್ತು ಕೆಲವು ವಿಶೇಷ ಪಡೆಗಳೊಂದಿಗೆ ಸಂಬಂಧವನ್ನು ಪರಿಶೀಲಿಸಲು ಪ್ರಾಧಿಕಾರದೊಂದಿಗೆ ನೋಂದಣಿ ಮಾಡಿಕೊಳ್ಳಬೇಕೆಂದು ಶರಣಾಗುವ ಮಾಜಿ ಅಧಿಕಾರಿಗಳಿಗೆ ತಾಲಿಬಾನ್ ಅಧಿಕಾರಿಗಳು ಸೂಚಿಸುತ್ತಾರೆ. ಆದರೆ ಈ ಪರಿಶೀಲನೆ ಪ್ರಕ್ರಿಯೆಯನ್ನು ಬಳಸಿಕೊಂಡು ಮಾಜಿ ಅಧಿಕಾರಿಗಳನ್ನು ಬಂಧಿಸಿ, ವಿಚಾರಣೆಯಿಲ್ಲದೆ ಶಿಕ್ಷಿಸಲಾಗುತ್ತದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಘಟಕದ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News