ರೋಲರ್ ಸ್ಕೇಟಿಂಗ್: ಮಂಗಳೂರಿನ ಆರ್ನಾ ರಾಜೇಶ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2021-12-07 11:39 GMT
ಆರ್ನಾ ರಾಜೇಶ್- ಅನಘಾ ರಾಜೇಶ್

ಮಂಗಳೂರು, ಡಿ.7: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ.25 ರಿಂದ 27ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಿದ 37ನೇ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮಂಗಳೂರಿನ ಅನಘಾ ರಾಜೇಶ್ ಹಾಗೂ ಆರ್ನಾ ರಾಜೇಶ್ ಪದಕಗಳನ್ನು ಪಡೆದು ಆರ್ನಾ ರಾಜೇಶ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

5 ರಿಂದ 7 ವರ್ಷದೊಳಗಿನ ಇನ್ ಲೈನ್ ಸ್ಕೇಟಿಂಗ್ ನ ಬಾಲಕಿಯರ ವಿಭಾಗದಲ್ಲಿ ಆರ್ನಾ ರಾಜೇಶ್ ಒಂದು ಚಿನ್ನದ ಹಾಗೂ ಒಂದು ಬೆಳ್ಳಿಯ ಪದಕ ಪಡೆದು ದೆಹಲಿಯಲ್ಲಿ ಡಿಸೆಂಬರ್ 11 ರಿಂದ 14ರವರೆಗೆ ನಡೆಯುವ ರಾಷ್ಟಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ. 11 ರಿಂದ 14 ವರ್ಷದೊಳಗಿನ ಇನ್ ಲೈನ್ ಸ್ಕೇಟಿಂಗ್ ನ ಬಾಲಕಿಯರ ವಿಭಾಗದಲ್ಲಿ ಅನಘಾ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆದಿದ್ದಾರೆ.

ಅನಘಾ ರಾಜೇಶ್ ಬಿಜೈ ಲೂರ್ಡ್ಸ್‌ ಸೆಂಟ್ರಲ್ ಸ್ಕೂಲ್ ನ 6 ನೇ ತರಗತಿಯಲ್ಲಿ ಹಾಗೂ ಆರ್ನಾ ರಾಜೇಶ್ ಅದೇ ಶಾಲೆಯ 1 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಇಬ್ಬರೂ ಬಾಲಕಿಯರು ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯರು.

ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸದಸ್ಯರಾಗಿರುವ ಈ ಇಬ್ಬರು ಬಾಲಕಿಯರು ಕ್ಲಬ್ ನ ತರಬೇತುದಾರರಾದ ಮೋಹನ್ ದಾಸ್.ಕೆ , ಜಯರಾಜ್ ಹಾಗೂ ರಮಾನಂದ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರಿನ ಪ್ರತೀಕ್ ರಾಜ ಅವರಿಂದ ಬೆಂಗಳೂರಿನಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News