ಕೊಂಕಣಿ ಕಾದಂಬರಿಕಾರ ದಾಮೋದರ್‌ ಮೌಝೋ, ಅಸ್ಸಾಮಿ ಕವಿ ನೀಲ್‌ಮಣಿ ಫೂಕನ್‌ ಗೆ ಜ್ಞಾನಪೀಠ ಪ್ರಶಸ್ತಿ

Update: 2021-12-07 14:01 GMT
Photo: Twitter and Facebook

ಹೊಸದಿಲ್ಲಿ: ಅಸ್ಸಾಮಿ ಕವಿ ನೀಲ್ಮಣಿ ಫೂಕನ್ ಮತ್ತು ಗೋವಾದ ಕೊಂಕಣಿ ಕಾದಂಬರಿಕಾರ ದಾಮೋದರ್ ಮೌಝೊ ಅವರನ್ನು ಮಂಗಳವಾರ ಭಾರತದ ಅತ್ಯುನ್ನತ ಸಾಹಿತ್ಯಿಕ ಗೌರವವಾದ ಜ್ಞಾನಪೀಠ ಪ್ರಶಸ್ತಿಯ ವಿಜೇತರು ಎಂದು ಘೋಷಿಸಲಾಗಿದೆ.

ಫೂಕನ್ ಅವರಿಗೆ 56ನೇ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಮೌಜೊ ಅವರಿಗೆ 57ನೇ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಪ್ರಶಸ್ತಿ ಪ್ರದಾನ ಮಾಡುವ ಸಾಹಿತ್ಯ ಸಂಸ್ಥೆ ಭಾರತೀಯ ಜ್ಞಾನಪೀಠ ತಿಳಿಸಿದೆ.

ಅಸ್ಸಾಮಿ ಕಾವ್ಯದಲ್ಲಿ ಫೂಕನ್‌ನ ಕೃತಿಯನ್ನು ಸಾಂಕೇತಿಕತೆಯ ಪ್ರತಿನಿಧಿಯಾಗಿ ಪರಿಗಣಿಸಲಾಗಿದೆ. ಅವರ ಗಮನಾರ್ಹ ಕೃತಿಗಳಲ್ಲಿ ಸೂರ್ಯ ಹೆನು ನಮಿ ಅಹೇ ಈ ನೋದಿಯೇದಿ (ಸೂರ್ಯನು ಈ ನದಿಯಿಂದ ಮುಳುಗುತ್ತಾನೆನ್ನಲಾಗುತ್ತಿದೆ) ಮತ್ತು ಕೊಬಿತಾ ಪ್ರಖ್ಯಾತಿ ಪಡೆದಿದೆ. ಕೊಂಕಣಿ ಕಾದಂಬರಿಕಾರ ಮೌಝೊ ಅವರು ಐದು ದಶಕಗಳ ವೃತ್ತಿಜೀವನದಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ಚಿತ್ರಕಥೆಗಳನ್ನು ಬರೆದಿದ್ದಾರೆ. 

ಮೌಝೊ ಅವರ ಕಾದಂಬರಿ ಕಾರ್ಮೆಲಿನ್‌ಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಮತ್ತು ಅನೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗೌರಿ ಲಂಕೇಶ್, ನರೇಂದ್ರ ದಾಭೋಲ್ಕರ್, ಎಂಎಂ ಕಲ್ಬುರ್ಗಿ ಮತ್ತು ಗೋವಿಂದ್ ಪನ್ಸಾರೆ ಅವರಂತಹ ವಿಚಾರವಾದಿ ಚಿಂತಕರ ಹತ್ಯೆಗಳೊಂದಿಗೆ ಸಂಬಂಧ ಹೊಂದಿರುವ ಉಗ್ರ ಹಿಂದುತ್ವ ಗುಂಪು ಸನಾತನ ಸಂಸ್ಥೆ ವಿರುದ್ಧ ಇವರು ಈ ಹಿಂದೆ ಬಹಿರಂಗವಾಗಿ ಮಾತನಾಡಿದ್ದರು. ಪತ್ರಕರ್ತೆ- ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಚು ರೂಪಿಸಿದ್ದನ್ನು ಆರೋಪಿಗಳು ಬಹಿರಂಗಪಡಿಸಿದ ನಂತರ 2018 ರಲ್ಲಿ ಮೌಝೊ ಅವರಿಗೆ ಪೊಲೀಸ್ ರಕ್ಷಣೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News