ಹೆಬ್ರಿಯಲ್ಲಿ ಬಂಟರ ಸಮಾವೇಶ ಉದ್ಘಾಟನೆ

Update: 2021-12-07 14:45 GMT

ಹೆಬ್ರಿ, ಡಿ.7: ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ಬಂಟರ ಸಮಾವೇಶವನ್ನು ಹೆಬ್ರಿಯ ಶ್ರೀಮತಿ ಶೀಲಾ ಸುಬೋದ್ ಬಲ್ಲಾಳ್ ಬಂಟರ ಭವನದಲ್ಲಿ ಆಯೋಜಿಸಲಾಗಿತ್ತು.

ಸಮಾವೇಶವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ವಹಿಸಿದ್ದರು. ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಬಂಟ ಮುಖಂಡರಿಂದ ಆಗಬೇಕು. ಇದಕ್ಕೆ ಎಲ್ಲಾ ಬಂಟ ಮುಖಂಡರು ಒಗ್ಗೂಡಿದಾಗ ಸಾಧ್ಯ ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಹಿತ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಹೆಬ್ರಿ ಉದಯಕುಮಾರ್ ಶೆಟ್ಟಿ ಸಂಪಾದಕತ್ವದಲ್ಲಿ ರಚಿಸಲಾದ ಬಂಟರ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಸಮಾಜದ ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ಗಳನ್ನು ಸಮ್ಮಾನಿಸಲಾಯಿತು. ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉದ್ಯಮಿ ಶಿವಪುರ ನವೀನ್ ಶೆಟ್ಟಿ, ಸಹನಾ ಸುರೇಂದ್ರ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ.ಬಲ್ಲಾಳ್, ಗೌರವಾಧ್ಯಕ್ಷ ರಮಾನಂದ ಹೆಗ್ಡೆ, ಉಪಾಧ್ಯಕ್ಷ ವಾದಿರಾಜ್ ಶೆಟ್ಟಿ, ಹರ್ಷ ಶೆಟ್ಟಿ ಬೇಳಂಜೆ, ಶಂಕರ ಶೆಟ್ಟಿ ಮುನಿಯಾಲು, ಯಶೋದಾ ಶೆಟ್ಟಿ, ನಿರ್ಮಾಲ ಹೆಗ್ಡೆ, ಮಾತೃ ಸಂಘದ ನಿರ್ದೇಶಕ ಭೂತುಗುಂಡಿ ಕರುಣಾಕರ ಶೆಟ್ಟಿ, ಪ್ರಮೋದ್ ಶೆಟ್ಟಿ, ಸಮಾ ವೇಶದ ಸಂಚಾಲಕ ಸುಕೇಶ್ ಶೆಟ್ಟಿ, ಕೈಪಿಡಿ ಸಂಪಾದಕ ಹೆಬ್ರಿ ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸೀತಾನದಿ ವಿಠಲ ಶೆಟ್ಟಿ ಸ್ವಾಗತಿಸಿ, ನಿತ್ಯಾನಂದ ಶೆಟ್ಟಿ ಹಾಗೂ ಚಾರ ದೀಪಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ನವೀನ್ ಕೆ.ಅಡ್ಯಂತಾಯ ವಂದಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ,ಬಂಟ ಸಮಾಜದ ಪ್ರಸಿದ್ಧ ಯಕ್ಷಗಾನ ‘ಭಾಗವತರಿಂದ ಯಕ್ಷ ಗಾನ ವೈಭವ, ಬಂಟರ ಸಂಘದ ಮಹಾಸಭೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News