ಡಿ.10ರಂದು ಉಡುಪಿ ನಗರ ಸಭೆ ಕಚೇರಿ ವ್ಯವಹಾರ ಸ್ಥಗಿತ

Update: 2021-12-07 16:29 GMT

ಉಡುಪಿ, ಡಿ.7: ಜಿಲ್ಲೆಯಲ್ಲಿ ಡಿಸೆಂಬರ್ 10 ರಂದು ನಡೆಯಲಿರುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ, ಉಡುಪಿ ನಗರಸಭಾ ಕಚೇರಿಯನ್ನು 105ನೇ ಮತಗಟ್ಟೆ ಕೇಂದ್ರವನ್ನಾಗಿ ಮಾಡಲಾಗಿದೆ.

ಆದ್ದರಿಂದ ಮತದಾನ ನಡೆಯುವ ದಿನದಂದು ಉಡುಪಿ ನಗರಸಭಾ ಕಚೇರಿ, ನಗರಸಭಾ ಕಟ್ಟಡಕ್ಕೆ ಹೊಂದಿಕೊಂಡಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮತ್ತು ಗ್ರಂಥಾಲಯ ಕಟ್ಟಡದಲ್ಲಿ ಯಾವುದೇ ಕಚೇರಿ ವ್ಯವಹಾರಗಳು ನಡೆಯುವು ದಿಲ್ಲ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News