ಮಲ್ಪೆ: ನಾಪತ್ತೆಯಾಗಿದ್ದ ಮಧಮಗ ಮುಂಬೈಯಲ್ಲಿ ಪತ್ತೆ

Update: 2021-12-07 16:32 GMT

ಮಲ್ಪೆ, ಡಿ.5: ಮದುವೆ ಇಷ್ಟ ಇಲ್ಲದ ಕಾರಣ ನಾಪತ್ತೆಯಾಗಿದ್ದ ಮಧುಮಗ, ಮುಂಬೈಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

 ಕಡೆಕಾರು ಟಿ.ಎ.ಪೈ ರಸ್ತೆಯ ನಿವಾಸಿ ಜಯ ಭಂಡಾರಿ ಎಂಬವರ ಮಗ ಅಮಿತ್ ಭಂಡಾರಿ (30) ನಾಪತ್ತೆಯಾಗಿದ್ದ ಮಧುಮಗ. ಮುಂಬೈಯಲ್ಲಿ ಕಂಪ್ಯೂಟರ್ ಸಾಫ್ಟ್‌ವೇರ್ ಕೆಲಸ ಮಾಡಿಕೊಂಡಿದ್ದ ಇವರು, ಬಾರ್ಕೂರು ದೇವಸ್ಥಾನದಲ್ಲಿ ಡಿ.12ಕ್ಕೆ ನಿಗಧಿಯಾಗಿದ್ದ ಮದುವೆ ಹಿನ್ನೆಲೆಯಲ್ಲಿ 10 ದಿನಗಳ ಹಿಂದೆ ಊರಿಗೆ ಬಂದಿದ್ದರು.

ಡಿ.5ರಂದು ರಾತ್ರಿ 8:30ಕ್ಕೆ ಹೋಟೆಲ್ ನಲ್ಲಿ ಊಟ ಮಾಡಿ ಬರುವುದಾಗಿ ಮನೆಯಿಂದ ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರು ನಾಪತ್ತೆಯಾಗಿದ್ದ ಮಧುಮಗನನ್ನು ಮುಂಬೈಯಲ್ಲಿ ಪತ್ತೆ ಹಚ್ಚಿದ್ದಾರೆ. ಇವರಿಗೆ ಮದುವೆ ಇಷ್ಟ ಇಲ್ಲದ ಕಾರಣ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News