ಮೆಸ್ಕಾಂ ಉದ್ಯೋಗಿ ನಾಪತ್ತೆ

Update: 2021-12-07 16:44 GMT

ಮಂಗಳೂರು, ಡಿ.7: ನಗರದ ಬಿಜೈ ಮೆಸ್ಕಾಂ ಉದ್ಯೋಗಿ ಶಿವೇಶ್ (28) ಎಂಬವರು ಮಂಗಳವಾರ ಕಾಣೆಯಾಗಿದ್ದು, ಈ ಬಗ್ಗೆ ಅವರ ಪತ್ನಿ ಧನುಜಾ ಎಂಬಾಕೆ ಉರ್ವ ಠಾಣೆಗೆ ದೂರು ನೀಡಿದ್ದಾರೆ.

ಶಿವೇಶ್ ಮಂಗಳವಾರ ಬೆಳಗ್ಗೆ 9:45ಕ್ಕೆ ಮನೆಯಿಂದ ಬೈಕ್‌ನಲ್ಲಿ ಬಿಜೈ ಮೆಸ್ಕಾಂ ಕಚೇರಿಗೆ ಕೆಲಸಕ್ಕೆ ತೆರಳಿದ್ದರು. ಕಚೇರಿ ಆವರಣದಲ್ಲಿ ತನ್ನ ಬೈಕನ್ನು ಪಾರ್ಕ್ ಮಾಡಿ ಮೊಬೈಲನ್ನೂ ಬೈಕ್‌ನಲ್ಲಿಟ್ಟು ಕಚೇರಿಯೊಳಗೂ ಹೋಗದೆ ಮನೆಗೂ ಮರಳದೆ ದಿಢೀರ್ ನಾಪತ್ತೆಯಾಗಿದ್ದಾರೆ. ಕಾಣೆಯಾದ ಶಿವೇಶ್ 5.10 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ದೃಢಶರೀರ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News