ಹಿಂದುತ್ವದ ರೋಗಕ್ಕೆ ಅಂಬೇಡ್ಕರ್ ವಿಚಾರಗಳೇ ಮದ್ದು: ಜಯನ್ ಮಲ್ಪೆ

Update: 2021-12-07 16:56 GMT

ಮಲ್ಪೆ, ಡಿ.7: ಅನ್ಯ ಧರ್ಮೀಯರನ್ನು ಹತ್ತಿಕ್ಕುವ, ಶೂದ್ರರ ಮತ್ತು ಮಹಿಳೆ ಯರ ಮೇಲೆ ತನ್ನ ಸಂಸ್ಕೃತಿಯನ್ನು ಬಲವಂತವಾಗಿ ಎಲ್ಲಾ ಸಮುದಾಯದ ಮೇಲೆ ಹೇರು ಸಂಘಪರಿವಾರದ ಹಿಂದೂತ್ವಕ್ಕೆ ಅಂಬೇಡ್ಕರ್ ಹಾಕಿದ ಬುನಾದಿಯೇ ನಿಜವಾದ ಮದ್ದು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರ 65ನೇ ಪರಿನಿಬ್ಬಾಣದ ಪ್ರಯಕ್ತ ಸೋಮವಾರ ಮಲ್ಪೆಯಲ್ಲಿ ಆಯೋಜಿಸಲಾದ ದಲಿತ ಕೇರಿಗಳಿಗೆ ಬೊಬತ್ತಿ ಹುರಿಸಿ ಮೆರವಣಿಗೆ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಸಂಘಪರಿವಾರ ಪ್ರತಿಪಾದಿಸುವ ಹಿಂದೂ ಸಂಸ್ಕೃತಿಯ ಅಪಾಯಕಾರಿ ಗುಣವೆಂದರೆ ಅದು ಚರಿತ್ರೆಯ ಉದ್ದಕ್ಕೂ ಆಳುವವರು ಮತ್ತು ಉಳ್ಳವರ ಜೊತೆ ಕೈಕೈ ಮಿಲಾಯಿಸಿಕೊಂಡೇ ಬಂದಿದೆ. ಅಂಬೇಡ್ಕರ್ ತಮ್ಮ ಸಂಘರ್ಷವನ್ನು ಪ್ರಾರಂಭಿಸಿ ಹಿಂದುತ್ವದ ನಿಜ ಬಣ್ಣ ಬಯಲು ಮಾಡಿದಾಗ ವಿಚಲಿತಗೊಂಡಿದೆ ಎಂದರು.

ದ.ಸಂ.ಸ ಉಡುಪಿ ಜಿಲ್ಲಾ ನಾಯಕ ಮಂಜುನಾಥ ಗಿಳಿಯಾರು, ಸಹಬಾಳ್ವೆ ಸಂಘಟನೆ ಅಧ್ಯಕ್ಷ ಅಮೃತ ಶೆಣೈ, ದಲಿತ ಮುಖಂಡರಾದ ವಾಸುದೇವ ಮುದ್ದೂರು, ಗಣೇಶ್ ನೆರ್ಗಿ, ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿದರು.

ಮೆರವಣಿಗೆಯನ್ನು ಉಡುಪಿ ನಗರಸಭೆ ಸದಸ್ಯ ರಮೇಶ್ ಕಾಂಚನ್ ಉದ್ಘಾಟಿಸಿದರು. ಮುಖಂಡರಾದ ಕೃಷ್ಣ ಶ್ರೀಯಾನ್ ಮಲ್ಪೆ, ಪ್ರಖ್ಯಾತ್ ಶಟ್ಟಿ, ಯತೀಶ್ ಕರ್ಕೆರ, ಲಕ್ಷ್ಮಶ್ ಶೆಟ್ಟಿ, ಸತೀಶ್ ಮಂಚಿ, ಸೂರಾಜ್ ಕಲ್ಮಾಡಿ, ರಮೇಶ್ ಕಲ್ಮಾಡಿ, ಸಂಜಯ್ ಆಚಾರ್ಯ, ಶಶಿ ತೊಟ್ಟಂ, ಸಂತೋಷ ಕಪ್ಪಟ್ಟು, ಮಂಜುನಾಥ ಕಪ್ಪೆಟ್ಟು, ಸತೀಶ್ ಕಪ್ಪೆಟ್ಟು, ಶರತ್ ತೊಟ್ಟಂ, ಮಂಜು ತೊಟ್ಟಂ, ಭಗವಾನ್, ಪ್ರಸಾದ್, ಶುಶೀಲ್ ಕುಮಾರ್, ಸುಕೇಶ್ ನಿಟ್ಟೂರು ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News