ರಸ್ತೆಯಲ್ಲಿ ಎರಡು ಇಟ್ಟಿಗಳನ್ನಿಟ್ಟದ್ದನ್ನು ಕೆಡವಲು ದಾರ್ಮಿಕ ಸಮಿತಿಯ ಅನುಮತಿಯ ಅಗತ್ಯವಿಲ್ಲ: ದಿಲ್ಲಿ ಹೈಕೋರ್ಟ್‌

Update: 2021-12-08 06:53 GMT

ಹೊಸದಿಲ್ಲಿ: ಡಿಫೆನ್ಸ್ ಕಾಲೋನಿಯಲ್ಲಿನ ಪಾದಚಾರಿ ಮಾರ್ಗದ ಮೇಲೆ "ಅಕ್ರಮವಾಗಿ ನಿರ್ಮಿಸಿದ" ದೇವಾಲಯವನ್ನು ಕೆಡವಲು ದೆಹಲಿ ಸರ್ಕಾರಕ್ಕೆ ಧಾರ್ಮಿಕ ಸಮಿತಿಯ ಅನುಮತಿ ಅಗತ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಮಂಗಳವಾರ ಹೇಳಿದೆ ಮತ್ತು ಅಧಿಕೃತ ಕಡತವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ರಾಜ್ಯದ ಗೃಹ ಇಲಾಖೆಗೆ ತಿಳಿಸಿದೆ.

ಸ್ಥಳೀಯ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಸ್ಥಳದಲ್ಲಿ 24 ಗಂಟೆಗಳ ಕಾಲ ಸಿಬ್ಬಂದಿಯನ್ನು ನಿಯೋಜಿಸಲು ಮತ್ತು ಅಲ್ಲಿಗೆ ಭೇಟಿ ನೀಡುವವರು ಹಾಗೂ ಕಾಣಿಕೆಗಳನ್ನು ಸಂಗ್ರಹಿಸುವ ವ್ಯಕ್ತಿಗಳ ವಿವರಗಳನ್ನು ಒಳಗೊಂಡಂತೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

"ಲೆಫ್ಟಿನೆಂಟ್‌ ಗವರ್ನರ್‌ ಆದೇಶದಡಿಯಲ್ಲಿ ರಚಿಸಲಾದ ಧಾರ್ಮಿಕ ಸಮಿತಿಯು ಅಂತಹ ಸೂಕ್ಷ್ಮ ಸ್ವಭಾವದ ಅತಿಕ್ರಮಣವನ್ನು ಪರಿಶೀಲಿಸುವ ಅಗತ್ಯವಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ, ಕೇವಲ ಕೆಲವು ವಿಗ್ರಹಗಳನ್ನು ಸ್ಥಳದಲ್ಲಿ ಇರಿಸಲಾಗಿದೆ" ಎಂದು ನ್ಯಾಯಮೂರ್ತಿ ರೇಖಾ ಪಲ್ಲಿ ಹೇಳಿದರು. ತನ್ನ ಜಾಗದ ಮುಂದೆ ಅತಿಕ್ರಮಿಸಿ ಕಟ್ಟಲಾಗಿರುವ ಈ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ನಿವಾಸಿಗಳು ಕೋರಿದ್ದ ಅರ್ಜಿಯ ವಿಚಾರಣೆಯ ವೇಳೆ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News