ಕಳೆದ 3 ವರ್ಷಗಳಲ್ಲಿ ಜಾಹೀರಾತಿಗೆ 1,698.89 ಕೋಟಿ ರೂ. ವೆಚ್ಚ: ಕೇಂದ್ರ ಸರಕಾರ ಮಾಹಿತಿ

Update: 2021-12-08 18:17 GMT
File Photo | PTI

ಹೊಸದಿಲ್ಲಿ, ಡಿ. 8: 2018 ಹಾಗೂ 2021ರ ನಡುವೆ ಮುದ್ರಣ ಹಾಗೂ ಇಲೆಕ್ಟ್ರಾನಿಕ್ಸ್ ಮಾಧ್ಯಮದಲ್ಲಿ ಜಾಹೀರಾತು ನೀಡಲು 1,698,89 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. 

ಎಐಯುಡಿಎಫ್ ಸಂಸದ ಬದ್ರುದ್ದಿನ್ ಅಜ್ಮಲ್ ರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಈ ಅಂಕಿ-ಅಂಶ ನೀಡಿದರು. 2018 ಹಾಗೂ 2021ರ ನಡುವೆ ಸರಕಾರ ಜಾಹೀರಾತಿಗೆ ಮಾಡಿದ ಖರ್ಚು ಹಾಗೂ ಜಾಹೀರಾತು ನೀಡಿದ ಉದ್ದೇಶದ ವಿವರವನ್ನು ಅಜ್ಮಲ್ ಕೇಳಿದರು. ಸರಕಾರದ ಜಾಹೀರಾತು ಪಡೆಯಲು ಸುದ್ದಿ ವಾಹಿನಿಗಳಿಗೆ ಅಗತ್ಯ ಇರುವ ಮಾನದಂಡಗಳ ಕುರಿತು ತಿಳಿಯಲು ಕೂಡ ಅವರು ಬಯಸಿದರು. 

‘‘ದೂರದ ಹಾಗೂ ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಸೇರಿದಂತೆ ಉದ್ದೇಶಿತ ಫಲಾನುಭವಿಗಳಲ್ಲಿ ಮುದ್ರಣ, ಇಲೆಕ್ಟ್ರಾನಿಕ್ಸ್ ಹಾಗೂ ಬಾಹ್ಯ ಮಾಧ್ಯಮದ ಮೂಲಕ ಜಾಗೃತಿ ಮೂಡಿಸುವುದು ಸರಕಾರ ಜಾಹೀರಾತು ನೀಡುವ ಪ್ರಧಾನ ಉದ್ದೇಶ’’ ಎಂದು ಠಾಕೂರ್ ಪ್ರತಿಕ್ರಿಯಿಸಿದರು. ‘ಬ್ಯೂರೊ ಆಫ್ ಔಟ್ರೀಚ್ ಆ್ಯಂಡ್ ಕಮ್ಯೂನಿಕೇಶನ್ಸ್ ’ನ ವೆಬ್ಸೈಟ್ ಜಾಹೀರಾತು ಪಡೆಯಲು ಸುದ್ದಿ ವಾಹಿನಿಗಳಿಗೆ ಅಗತ್ಯ ಇರುವ ಮಾನದಂಡಗಳನ್ನು ತಿಳಿಸಲಾಗಿದೆ ಎಂದು ಠಾಕೂರ್ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News