ಲಿಬಿಯಾ: ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ‌

Update: 2021-12-12 18:32 GMT
ಸಾಂದರ್ಭಿಕ ಚಿತ್ರ:PTI

ಟ್ರಿಪೋಲಿ, ಡಿ.12: ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ವಿಳಂಬವಾಗಲಿದೆ ಎಂದು ಲಿಬಿಯಾದ ಚುನಾವಣಾ ಆಯೋಗ ಪ್ರಕಟಿಸಿದೆ.

ಲಿಬಿಯಾದ ಅಧ್ಯಕ್ಷ ಹುದ್ದೆಯ ಚುನಾವಣೆಗೆ 2 ವಾರಕ್ಕಿಂತಲೂ ಕಡಿಮೆ ಅವಧಿ ಇರುವಂತೆಯೇ ಆಯೋಗ ಈ ಹೇಳಿಕೆ ನೀಡಿದೆ. ಅಭ್ಯರ್ಥಿಗಳ ಕುರಿತು ಸಲ್ಲಿಸಿರುವ ಆಕ್ಷೇಪ ಮತ್ತು ಅರ್ಜಿಯ ವಿಚಾರಣೆ ನಡೆಸುವ ನ್ಯಾಯಾಲಯ ಆದೇಶ ಹೊರಡಿಸಿದ 2 ವಾರದ ಬಳಿಕ ಆಯೋಗವು ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೊಳಿಸಬೇಕಿದೆ.

ದಶಕಗಳ ಕಾಲದಿಂದ ಹಿಂಸಾಚಾರದಿಂದ ಜರ್ಝರಿತಗೊಂಡಿರುವ ಲಿಬಿಯಾದಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ಡಿ.24ಕ್ಕೆ ಅಧ್ಯಕ್ಷೀಯ ಹುದ್ದೆ ಚುನಾವಣೆ ನಿಗದಿಯಾಗಿದೆ. ಚುನಾವಣೆಯ ಕಾನೂನು ಆಧಾರ, ಚುನಾವಣೆ ದಿನಾಂಕ, ಅಭ್ಯರ್ಥಿಗಳ ಆಯ್ಕೆ ಮುಂತಾದ ಹಲವು ವಿಷಯಗಳಲ್ಲಿ ಆರಂಭದಿಂದಲೂ ಹಲವು ಅಡೆತಡೆ ಎದುರಾಗಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾದರೆ ಚುನಾವಣೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರಕುತ್ತದೆ. ಆದರೆ ಚುನಾವಣಾ ಆಯೋಗ ಈ ಕುರಿತು ಇನ್ನೂ ಪ್ರಕಟಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News