×
Ad

ಭಾರತದ ಹರ್ನಾಝ್ ಸಂಧು ಮಿಸ್ ಯುನಿವರ್ಸ್!

Update: 2021-12-13 09:35 IST
Photo: Twitter 

ಹೊಸದಿಲ್ಲಿ, ಡಿ. 13: ಇಪ್ಪತ್ತೊಂದು ವರ್ಷಗಳ ಬಳಿಕ ಹರ್ನಾಝ್ ಸಂಧು ಅವರು ಭುವನ ಸುಂದರಿ (ಮಿಸ್ ಯೂನಿವರ್ಸ್) ಪಟ್ಟ ಅಲಂಕರಿಸಿದ್ದಾರೆ. 2000ದಲ್ಲಿ ಲಾರಾ ದತ್ ಅವರು ಭುವನ ಸುಂದರಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇಸ್ರೇಲ್‌ನ ಎಯಿಲಾಟ್‌ನಲ್ಲಿ  ಇಂದು ನಡೆದ 70ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಸಂಧು ಭಾರತವನ್ನು ಪ್ರತಿನಿಧಿಸಿದ್ದರು. ಪಂಜಾಬ್ ಮೂಲದ 21ರ ಹರೆಯದ ಚೆಲುವೆ ಸಂಧು ಗೆಲುವಿಗೆ ಮುನ್ನ ಪೆರುಗ್ವೆಯ ನಾಡಿಯಾ ಫೆರೇರಾ ಹಾಗೂ ದಕ್ಷಿಣ ಆಫ್ರಿಕಾದ ಲಾಲೇಲಾ ಮ್ಸಾವಾನೆ ವಿರುದ್ಧ ಮುನ್ನಡೆ ಸಾಧಿಸಿದ್ದರು. ಕೊನೆಯ ಸುತ್ತಿನಲ್ಲಿ ಇಬ್ಬರನ್ನು ಸೋಲಿಸಿ ಭುವನ ಸುಂದರಿ (ಮಿಸ್ ಯೂನಿವರ್ಸ್) ಕಿರೀಟವನ್ನು ತನ್ನದಾಗಿಸಿಕೊಂಡರು. 2020ರ ಮೆಕ್ಸಿಕೊದ ಮಾಜಿ ವಿಶ್ವಸುಂದರಿ ಆ್ಯಂಡ್ರಿಯಾ ಮೆಝಾ ಅವರು ಸಂಧು ಅವರಿಗೆ ವಿಶ್ವಸುಂದರಿ ಕಿರೀಟ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News