ನವಂಬರ್ ನಲ್ಲಿ ಶೇ.4.91ಕ್ಕೆ ಹೆಚ್ಚಿದ ಚಿಲ್ಲರೆ ಹಣದುಬ್ಬರ

Update: 2021-12-13 15:45 GMT
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ,ಡಿ.13: ಸರಕಾರವು ಸೋಮವಾರ ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ ಕಳೆದ ಅಕ್ಟೋಬರ್‌ನಲ್ಲಿ ಶೇ.4.48ರಷ್ಟಿದ್ದ ಬಳಕೆದಾರ ಬೆಲೆ ಸೂಚ್ಯಂಕ (ಸಿಪಿಐ)ವನ್ನು ಆಧರಿಸಿರುವ ಚಿಲ್ಲರೆ ಹಣದುಬ್ಬರವು ನವಂಬರ್ ತಿಂಗಳಿಗೆ ಶೇ.4.91ಕ್ಕೆ ಏರಿಕೆಯಾಗಿದೆ.

ಸಿಪಿಐಗೆ ಅರ್ಧದಷ್ಟು ಕೊಡುಗೆ ಸಲ್ಲಿಸುವ ಆಹಾರ ಬೆಲೆಗಳು ಕಳೆದ ತಿಂಗಳ ಶೇ.0.85ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.1.87ರಷ್ಟು ಏರಿಕೆಯನ್ನು ಕಂಡಿವೆ.

ಕಳೆದ ವರ್ಷದ ನವಂಬರ್‌ಗೆ  ಹೋಲಿಸಿದರೆ ಖಾದ್ಯ ತೈಲಗಳ ಬೆಲೆಗಳಲ್ಲಿ ಸುಮಾರು ಶೇ.30ರಷ್ಟು ಏರಿಕೆಯಾಗಿದ್ದರೆ,ತರಕಾರಿಗಳ ಬೆಲೆಗಳು ಶೇ.13.6ರಷ್ಟು ಇಳಿದಿವೆ.

ಹಿಂದಿನ ತಿಂಗಳ ಶೇ.14.35ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಚಿಲ್ಲರೆ ಇಂಧನ ಬೆಲೆಗಳಲ್ಲಿ ಶೇ.13.35ರಷ್ಟು ಏರಿಕೆಯಾಗಿದೆ. ಆರ್‌ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ರೂಪಿಸುವಾಗ ಚಿಲ್ಲರೆ ಹಣದುಬ್ಬರವನ್ನು ಪ್ರಧಾನವಾಗಿ ನೆಚ್ಚಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News