ಹೆಲಿಕಾಪ್ಟರ್ ದುರಂತ: ಜ.ರಾವತ್ ಗಾಗಿ ಸ್ಮಾರಕ ನಿರ್ಮಿಸುವಂತೆ ಕೇಂದ್ರ, ರಾಜ್ಯ ಸರಕಾರಕ್ಕೆ ಕೂನೂರು ಜನತೆಯ ಮನವಿ

Update: 2021-12-13 16:04 GMT

ಉದಕಮಂಡಲಂ,ಡಿ.13: ರಾಜ್ಯದಲ್ಲಿ ಇತ್ತೀಚಿಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ ಸೇನಾ ಸಿಬ್ಬಂದಿಗಳ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸುವಂತೆ ನೀಲಗಿರಿ ಜಿಲ್ಲೆಯ ಕೂನೂರು ವೆಲಿಂಗ್ಟನ್ ಕಂಟೋನ್ಮೆಂಟ್ ನ ನಿವಾಸಿಗಳು ಪ್ರಧಾನಿ ನರೇಂದ್ರ ಮೋದಿ,‌ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಲಿಖಿತ ಮನವಿಗಳನ್ನು ಸಲ್ಲಿಸಿದ್ದಾರೆ.

ಕೂನೂರು ಸಮೀಪ ಸಂಭವಿಸಿರುವ ಈ ದುರ್ಘಟನೆಯು ಸ್ಥಳೀಯರಿಗೆ ದುಃಖವನ್ನುಂಟು ಮಾಡಿದೆ. ಹುತಾತ್ಮ ಯೋಧರಿಗೆ ಸಾರ್ವಜನಿಕರು ತಮ್ಮ ಗೌರವಗಳನ್ನು ಸಲ್ಲಿಸುವಂತಾಗಲು ತಮಿಳು ನಾಡು ಕಂದಾಯ ಇಲಾಖೆಗೆ ಸೇರಿದ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಬೇಕು ಎಂದು ಈ ಪತ್ರಗಳಲ್ಲಿ ಕೋರಲಾಗಿದೆ.

ದುರಂತ ಸಂಭವಿಸಿದ ನಂಜಪ್ಪಸಥಿರಂ ಬಳಿಯ ಮೆಟ್ಟುಪಾಳ್ಯಂ-ಊಟಿ ಮಾರ್ಗದಲ್ಲಿಯ ಕಟ್ಟೇರಿ ಪಾರ್ಕ್ ಮತ್ತು ರುನ್ನಿಮೇಡು ರೈಲ್ವೆ ನಿಲ್ದಾಣಗಳಿಗೆ ಜ.ರಾವತ್ ಅವರ ನಾಮಕರಣವನ್ನು ಮಾಡಬೇಕು ಎಂದೂ ಪತ್ರದಲ್ಲಿ ವಿನಂತಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News