ವಿಮಾನದ ಕಾರ್ಗೊ ವಿಭಾಗದಲ್ಲಿ ನಿದ್ದೆಗೆ ಜಾರಿ ಮುಂಬೈನಿಂದ ದುಬೈಗೆ ತೆರಳಿದ ಕಾರ್ಮಿಕ!

Update: 2021-12-14 17:41 GMT

ಹೊಸದಿಲ್ಲಿ: ಮುಂಬೈ-ಅಬುಧಾಬಿ ವಿಮಾನದ ಕಾರ್ಗೊ ವಿಭಾಗದಲ್ಲಿ ನಿದ್ದೆಗೆ ಜಾರಿದ್ದ   ಇಂಡಿಗೋ ಏರ್‌ಲೈನ್ಸ್‌ನ ಕಾರ್ಮಿಕನೊಬ್ಬ ಯುಎಇಯ ರಾಜಧಾನಿ ನಗರಕ್ಕೆ ತಲುಪಿದ ಘಟನೆ ರವಿವಾರ ನಡೆದಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡಿದ ನಂತರ  ಖಾಸಗಿ ಕ್ಯಾರಿಯರ್‌ನ ಲೋಡರ್‌ಗಳಲ್ಲಿ ಒಬ್ಬರು ರವಿವಾರದ ವಿಮಾನದಲ್ಲಿ ಕಾರ್ಗೋ ವಿಭಾಗದಲ್ಲಿ ಬ್ಯಾಗೇಜ್‌ನ ಹಿಂದೆ ಮಲಗಿದ್ದರು ಎಂದು ಅವರು ಹೇಳಿದರು.

ಮುಂಬೈ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ಕಾರ್ಗೋ ಬಾಗಿಲು ಮುಚ್ಚಿತ್ತು ಹಾಗೂ ಲೋಡರ್ ಗೆ ಎಚ್ಚರವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ಅಬುಧಾಬಿಯಲ್ಲಿ ಇಳಿದ ಸಂದರ್ಭ ಆತ ಸುರಕ್ಷಿತವಾಗಿದ್ದ. ಅಬುಧಾಬಿ ಅಧಿಕಾರಿಗಳು ಕಾರ್ಮಿಕನ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದರು ಹಾಗೂ ಅವರ ದೈಹಿಕ ಸ್ಥಿತಿ ಸ್ಥಿರ ಮತ್ತು ಸಾಮಾನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಬುಧಾಬಿಯಲ್ಲಿ ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು ಪಡೆದ ನಂತರ ಅದೇ ವಿಮಾನದಲ್ಲಿ ಪ್ರಯಾಣಿಕನಾಗಿ ಕಾರ್ಮಿಕನನ್ನು ಮುಂಬೈಗೆ ವಾಪಸ್ ಕಳುಹಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News