ಹಾಂಕಾಂಗ್: ಗಗನಚುಂಬಿ ಕಟ್ಟಡದಲ್ಲಿ ಭಾರೀ ಬೆಂಕಿ ದುರಂತ, 12 ಮಂದಿಗೆ ಗಾಯ

Update: 2021-12-15 18:55 GMT
ಸಾಂದರ್ಭಿಕ ಚಿತ್ರ

ಹಾಂಕಾಂಗ್, ಡಿ.15: ಹಾಂಕಾಂಗ್ ನ ಗಗನಚುಂಬಿ ಕಟ್ಟಡವೊಂದರಲ್ಲಿ ಬುಧವಾರ ಭೀಕರ ಬೆಂಕಿ ದುರಂತ ಸಂಭವಿಸಿದ್ದು ಕನಿಷ್ಟ 12 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಮೇಲ್ಛಾವಣಿಯಲ್ಲಿ ಹಲವಾರು ಮಂದಿ ಸಿಕ್ಕಿಬಿದ್ದಿದ್ದು ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಹಾಂಕಾಂಗ್ ನ ಜನಪ್ರಿಯ ಕಾಸ್ವೇ ಬೇ ಬಿಸಿನೆಸ್ ಸೆಂಟರ್ನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಬುಧವಾರ ಬೆಳಗ್ಗಿನ ವೇಳೆ ಬೆಂಕಿ ಕಾಣಿಸಿಕೊಂಡಿದೆ. 38 ಮಹಡಿಯ ಈ ಕಟ್ಟಡದಲ್ಲಿ ಕಚೇರಿಗಳು ಹಾಗೂ ಶಾಪಿಂಗ್ ಮಾಲ್ ಗಳಿವೆ. ಬೆಂಕಿ ದುರಂತದಲ್ಲಿ ಕನಿಷ್ಟ 12 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಳಗಿನ ಮಹಡಿಗಳಲ್ಲಿ ಸಿಕ್ಕಿಬಿದ್ದವರನ್ನು ಏಣಿ ಬಳಸಿ ರಕ್ಷಿಸಲಾಗಿದೆ. ಮೇಲಿನ ಹಂತದ ಮಹಡಿಯಲ್ಲಿನ ಹೋಟೆಲ್‌ನಲ್ಲಿ ಹಲವರು ಸಿಕ್ಕಿಬಿದ್ದಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ. ಕಟ್ಟಡದ ಮೇಲ್ಭಾಗದಲ್ಲಿದ್ದವರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಬೆಂಕಿ ಈಗ ನಿಯಂತ್ರಣಕ್ಕೆ ಬಂದಿದೆ. ಉಸಿರಾಟದ ಉಪಕರಣ ಹೊಂದಿರುವ ತಂಡ ಹಾಗೂ 2 ವಾಟರ್‌ಜೆಟ್‌ಗಳನ್ನು ಮುಂದಿನ ಹಂತದ ರಕ್ಷಣಾ ಕಾರ್ಯಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News