×
Ad

ಜನರಲ್ ಬಿಪಿನ್ ರಾವತ್ ರನ್ನು ಅವಮಾನಿಸಿದ್ದ ಮಹಿಳೆಗೆ ಜಾಮೀನು

Update: 2021-12-17 17:17 IST

ಹೊಸದಿಲ್ಲಿ: ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು 'ಯುದ್ಧ ಅಪರಾಧಿ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣಿಸಿ ಪೋಸ್ಟ್ ಮಾಡಿದ್ದ ಹಾಜಿ ಪಬ್ಲಿಕ್ ಸ್ಕೂಲ್‍ನ ಮಾಜಿ ನಿರ್ದೇಶಕಿ ಸಬ್ಬಾಹ್ ಹಾಜಿ ಅವರನ್ನು ಇಂದು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಆಕೆ ಮಾಡಿದ ಪೋಸ್ಟ್ ಗಳು ಸಾಕಷ್ಟು ಹರಿದಾಡಿದ್ದವಲ್ಲದೆ ಆಕೆಯ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿದ್ದರು.

ಆಕೆ ಈ ಹಿಂದೆ ನಿರ್ದೇಶಕಿ ಹಾಗೂ ಶಿಕ್ಷಕಿಯಾಗಿದ್ದ ಶಾಲೆಯನ್ನೂ ಮುಚ್ಚಬೇಕೆಂದು ಹಲವರು ಆಗ್ರಹಿಸಿದ್ದರು. ಆದರೆ ಆಕೆಯ ನಿಲುವು ಸಂಸ್ಥೆಯ ನಿಲುವಲ್ಲ ಎಂದು ಶಾಲೆಯ ಆಡಳಿತ ನಂತರ ಸ್ಪಷ್ಟೀಕರಣ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News