ಅಫ್ಘಾನ್ ಗೆ ಸೌದಿ ಅರೇಬಿಯಾ ನೆರವಿನ ಪ್ರಥಮ ಕಂತು ರವಾನೆ

Update: 2021-12-17 17:05 GMT
ಸಾಂದರ್ಭಿಕ ಚಿತ್ರ:PTI

ಕಾಬೂಲ್, ಡಿ.17: ಅಫ್ಘಾನಿಸ್ತಾನಕ್ಕೆ ಸೌದಿ ಅರೇಬಿಯಾ ಒದಗಿಸುತ್ತಿರುವ ಮಾನವೀಯ ನೆರವಿನ ಪ್ರಥಮ ಕಂತಿನಲ್ಲಿ 197 ಟನ್ ಗಳಷ್ಟು ಆಹಾರ ಮತ್ತು ರಕ್ಷಣೆ ಸಾಧನಗಳನ್ನು ಗುರುವಾರ ಒದಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾನವೀಯ ನೆರವಿನ ಪ್ರಥಮ ಕಂತನ್ನು ಆರು ವಿಮಾನಗಳ ಮೂಲಕ ಕಾಬೂಲ್ ಗೆ ರವಾನಿಸಲಾಗಿದೆ. ಕಿಂಗ್ ಸಲ್ಮಾನ್ ಹ್ಯುಮಾನಿಟೇರಿಯನ್ ಏಯ್ಡಾ ಆ್ಯಂಡ್ ರಿಲೀಫ್ ಸೆಂಟರ್(ಕೆಎಸ್ ರಿಲೀಫ್) ಒದಗಿಸಿದ 2 ವಿಮಾನಗಳಲ್ಲಿ 1,647 ಆಹಾರದ ಚೀಲ ಹಾಗೂ 192 ರಕ್ಷಣೆ(ಆಶ್ರಯ) ಸಾಧನಗಳ ಚೀಲಗಳನ್ನು ರವಾನಿಸಲಾಗಿದೆ. ದೊರೆ ಸಲ್ಮಾನ್ ಮತ್ತು ಯುವರಾಜರ ನಿರ್ದೇಶನದಂತೆ 197 ಟನ್ ಗಳಷ್ಟು ಆಹಾರ ಮತ್ತು ಆಶ್ರಯ ಸಾಧನಗಳನ್ನು 6 ವಿಮಾನದ ಮೂಲಕ ರವಾನಿಸಲಾಗಿದೆ . ಮುಂದಿನ ಹಂತದಲ್ಲಿ ಪಾಕಿಸ್ತಾನದ ಮೂಲಕ ಅಫ್ಘಾನ್‌ಗೆ ರಸ್ತೆ ಮಾರ್ಗದಲ್ಲಿ 200 ಟ್ರಕ್ ಗಳ ಮೂಲಕ ನೆರವು ರವಾನಿಸಲಾಗುವುದು ಎಂದು ಕೆಎಸ್ ರಿಲೀಫ್ ನ ಪ್ರಧಾನ ಮೇಲ್ವಿಚಾರಕ ಅಬ್ದುಲ್ಲಾ ಅಲ್ ರಬೀಹ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News