×
Ad

ಪಂಜಾಬ್‌: ಸಿಖ್ ಧ್ವಜಕ್ಕೆ ಅಗೌರವ ಆರೋಪ; ಮತ್ತೊಬ್ಬ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

Update: 2021-12-19 15:01 IST

 ಹೊಸದಿಲ್ಲಿ: ಪಂಜಾಬ್‌ನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸಿಖ್ ಧ್ವಜಕ್ಕೆ ಅಗೌರವ ತೋರಿದ ಆರೋಪದ  ಮೇಲೆ ಹತ್ಯೆ ಮಾಡಲಾಗಿದೆ. ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಇದೇ ರೀತಿಯ ಸಾವು ಸಂಭವಿಸಿದ 24 ಗಂಟೆಗಳ ನಂತರ ಈ ಘಟನೆ ನಡೆದಿದೆ.

 ಕಪುರ್ತಲಾ ಜಿಲ್ಲೆಯ ನಿಜಂಪುರ ಗ್ರಾಮದ ನಿವಾಸಿಗಳು ಇಂದು ಮುಂಜಾನೆ ಗುರುದ್ವಾರದಿಂದ ವ್ಯಕ್ತಿಯನ್ನು ಹಿಡಿದಿದ್ದಾರೆ  ಎನ್ನಲಾಗಿದೆ.  ಮುಂಜಾನೆ 4 ಗಂಟೆಯ ಸುಮಾರಿಗೆ  ವ್ಯಕ್ತಿಯು ನಿಶಾನ್ ಸಾಹಿಬ್ (ಸಿಖ್ ಧ್ವಜ) ಗೆ  'ಅಗೌರವ' ತೋರುತ್ತಿರುವುದು ಕಂಡುಬಂದಿದೆ ಎಂದು ಅವರು ಆರೋಪಿಸಿದ್ದಾರೆ.

ಪೊಲೀಸ್ ತಂಡವು ಸ್ಥಳಕ್ಕೆ ತಲುಪಿ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡರೂ  ಸಿಖ್ ಗುಂಪುಗಳು ಆತನನ್ನು ತಮ್ಮ ಮುಂದೆ ಪ್ರಶ್ನಿಸುವಂತೆ ಒತ್ತಾಯಿಸಿದವು.

ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ಸ್ಥಳೀಯರು ವ್ಯಕ್ತಿಯನ್ನು ಥಳಿಸಿ ಕೊಂದಿದ್ದಾರೆ ಎಂದು NDTV ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News