ಕೋಲ್ಕತ್ತಾ ಮಹಾನಗರ ಪಾಲಿಕೆ ಚುನಾವಣೆ: ತೃಣಮೂಲ ಕಾಂಗ್ರೆಸ್ ಗೆ ಭಾರೀ ಮುನ್ನಡೆ

Update: 2021-12-21 06:45 GMT

ಹೊಸದಿಲ್ಲಿ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಮಂಗಳವಾರ ಭಾರೀ ಭದ್ರತೆಯಲ್ಲಿ ನಡೆಸಲಾಗುತ್ತಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭಾರೀ  ಮುನ್ನಡೆ ಸಾಧಿಸಿದೆ.

ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನ 144 ಸ್ಥಾನಗಳ ಪೈಕಿ ತೃಣಮೂಲ ಕಾಂಗ್ರೆಸ್(ಟಿಎಂಸಿ) 17 ಸ್ಥಾನಗಳನ್ನು ಗೆದ್ದುಕೊಂಡಿದ್ದು,  117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರವಿವಾರ ಕೆಎಂಸಿಗೆ ಮತದಾನ ನಡೆದಿದೆ.

ರಾಜ್ಯದ ಆಡಳಿತ ಪಕ್ಷವು ತನ್ನ ಸಮೀಪದ ಪ್ರತಿಸ್ಪರ್ಧಿಗಳಾದ ಬಿಜೆಪಿ ಹಾಗೂ  ಎಡಪಕ್ಷಗಳಿಗಿಂತ ಭಾರೀ  ಮುನ್ನಡೆ ಸಾಧಿಸಿದೆ. ಬಿಜೆಪಿ ಹಾಗೂ  ಎಡಪಕ್ಷಗಳು ತಲಾ ಮೂರರಲ್ಲಿ ಕಾಂಗ್ರೆಸ್ ಕೇವಲ ಎರಡು ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ವರ್ಷದ ಆರಂಭದಲ್ಲಿ ತನ್ನ ಎದುರಾಳಿ ಬಿಜೆಪಿ ವಿರುದ್ಧ ಭರ್ಜರಿ ವಿಜಯದೊಂದಿಗೆ ಅಧಿಕಾರ ಉಳಿಸಿಕೊಂಡಿದ್ದ  ತೃಣಮೂಲ  2015 ರಿಂದ 114 ಸ್ಥಾನಗಳನ್ನು ಗೆದ್ದಾಗಿನಿಂದ ನಗರಪಾಲಿಕೆ ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತಾ ಬಂದಿದೆ. ಬಿಜೆಪಿ ಹಾಗೂ  ಎಡಪಕ್ಷಗಳು ಹಿಂದಿನ ಚುನಾವಣೆಗಿಂತ ಗಣನೀಯವಾಗಿ ಕಳಪೆ ಫಲಿತಾಂಶದತ್ತ ಸಾಗುತ್ತಿವೆ. ಕಾಂಗ್ರೆಸ್ 4 ನೇ ಸ್ಥಾನದಲ್ಲಿದೆ ಹಾಗೂ  ಮೊದಲಿಗಿಂತ ಕಡಿಮೆ ಸ್ಥಾನಗಳೊಂದಿಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

 ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಹೋರಾಡಿದ ನಂತರ ಎಡಪಕ್ಷಗಳು ಹಾಗೂ  ಕಾಂಗ್ರೆಸ್ ಕೋಲ್ಕತ್ತಾ ನಗರಪಾಲಿಕೆ ನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News