ಸಣ್ಣ ಕಿರಾಣಿ ಅಂಗಡಿ ಮಾಲಿಕನ ಪುತ್ರನಿಗೆ ಭಾರತದ ಅಂಡರ್-19 ತಂಡದಲ್ಲಿ ಸ್ಥಾನ
ಹೊಸದಿಲ್ಲಿ: ಅಂಗಡಿ ಮಾಲಿಕ ಶ್ರವಣ್ ಯಾದವ್ ಅವರ ಮಗ ಸಿದ್ಧಾರ್ಥ್ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾದ ಬಳಿಕ ಗಾಝಿಯಾಬಾದ್‌ನ ಕೋಟ್‌ಗಾಂವ್‌ನಲ್ಲಿರುವ ಸಣ್ಣ ಸಾಮಾನ್ಯ ಕಿರಾಣಿ ಅಂಗಡಿಯೊಂದು ರವಿವಾರ ಸಂಜೆಯಿಂದ ಆಕರ್ಷಣೆಯ ಕೇಂದ್ರವಾಗಿದೆ.
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಸಿದ್ದಾರ್ಥ್ ಮುಂಬರುವ ಏಷ್ಯಾ ಕಪ್ ಹಾಗೂ ನಂತರ ಜನವರಿಯಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಸಿದ್ಧಾರ್ಥ್ ಕ್ರಿಕೆಟ್ ಪ್ರತಿಭೆಗಳನ್ನು ಉತ್ಪಾದಿಸಲು ಹಿಂದುಳಿದ ಭಾರತದ ಸಣ್ಣ ಪಟ್ಟಣ ದಿಂದ ಬಂದಿದ್ದಾರೆ. ಹಿಸಾರ್‌ನ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಬಾನಾ, ಸಹರಾನ್‌ಪುರದ ವೇಗಿ ವಾಸು ವಾಟ್ಸ್ ಹಾಗೂ ಒಸ್ಮಾನಾಬಾದ್‌ನ ರಾಜವರ್ಧನ್ ಹಂಗರ್ಗೇಕರ್ ಸಣ್ಣ ಪಟ್ಟಣದಿಂದ ಬಂದಿದ್ದರೂ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಶಾಪ್‌ಕೀಪರ್ ಶ್ರವಣ್ ಯಾದವ್ ಗಾಝಿಯಾಬಾದ್‌ನ ನೆಟ್ಸ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್‌ಗೆ ಒಮ್ಮೆ ಬೌಲಿಂಗ್ ಮಾಡಿದ್ದರು. ಅವರಿಗೆ ಕ್ರಿಕೆಟ್ ಮೇಲಿನ ಅವರ ಉತ್ಸಾಹವು ಅಪರಿಮಿತವಾಗಿದ್ದು, ಶ್ರವಣ್ ಕನಸನ್ನು ಅವರ ಪುತ್ರ ಈಡೇರಿಸುತ್ತಿದ್ದಾನೆ.
“ಅವನು (ಸಿದ್ದಾರ್ಥ್) ಚಿಕ್ಕವನಿದ್ದಾಗ ಅವನು ಒಂದು ದಿನ ಕ್ರಿಕೆಟ್ ಆಡುವುದನ್ನು ನೋಡುವುದು ನನ್ನ ಕನಸಾಗಿತ್ತು. ಅವನು ಮೊದಲ ಬಾರಿಗೆ ಬ್ಯಾಟ್ ಹಿಡಿದಾಗ ಅವನ ಎಡಗೈನಲ್ಲಿ ಬ್ಯಾಟ್ ಹಿಡಿದಿದ್ದ. ಅಂದಿನಿಂದ ಆತ ಎಡಗೈ ಬ್ಯಾಟ್ಸ್‌ಮನ್ ಆಗಿದ್ದಾನೆ”ಎಂದು ಶ್ರವಣ್ ಹೇಳುತ್ತಾರೆ.
ಸಿದ್ಧಾರ್ಥ್ 8ನೇ ವಯಸ್ಸಿನಲ್ಲಿ ಕ್ರಿಕೆಟ್ ನತ್ತ ಹೆಚ್ಚು ಗಮನ ನೀಡಲಾರಂಭಿಸಿದರು. ತನ್ನ ತಂದೆಯ ಕನಸನ್ನು ನನಸಾಗಿಸಲು ಕಠಿಣ ಪರಿಶ್ರಮಪಟ್ಟರು.