2018ರಲ್ಲೇ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಲು ರವಿಚಂದ್ರನ್ ಅಶ್ವಿನ್ ನಿರ್ಧರಿಸಿದ್ದೇಕೆ?

Update: 2021-12-21 15:34 GMT

 ಹೊಸದಿಲ್ಲಿ: 2018 ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದ್ದರೂ ನನಗೆ ಯಾರೂ ಬೆಂಬಲ ನೀಡಿರಲಿಲ್ಲ. ಆಗ ನಾನು ನಿವೃತ್ತಿಯಾಗುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೆ ಎಂದು ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಬಹಿರಂಗಪಡಿಸಿದ್ದಾರೆ.

 ಅಶ್ವಿನ್ ಭಾರತೀಯ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಅಸ್ತ್ರ ಮಾತ್ರವಲ್ಲದೆ ಪಂದ್ಯದ ಸಮಯದಲ್ಲಿ ತಂಡವು ಅನಿಶ್ಚಿತ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡಲು ಉಪಯುಕ್ತವಾದ ಬ್ಯಾಟಿಂಗ್ ಕೂಡ  ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ಆರು ಎಸೆತಗಳನ್ನು ಎಸೆದ ನಂತರ ಸುಸ್ತಾಗುವ ಸಂದರ್ಭವಿತ್ತು. 2018 ಹಾಗೂ  2020 ರ ನಡುವೆ  ನಾನು ವಿವಿಧ ಹಂತಗಳಲ್ಲಿ ಕ್ರೀಡೆಯನ್ನು ತ್ಯಜಿಸಲು ಆಲೋಚಿಸಿದ್ದೇನೆ. ನಾನು ಸಾಕಷ್ಟು ಪ್ರಯತ್ನ ಮಾಡಿದರೂ ಫಲ ನೀಡುತ್ತಿಲ್ಲ' ಎಂದು ನಾನು ಭಾವಿಸಿದ್ದೆ" ಎಂದು ಅಶ್ವಿನ್ ಹೇಳಿರುವುದಾಗಿ ESPNcricinfo ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News