ಕಾನೂನು ನಿಯಮಗಳ ಅನುಸರಣಾ ಲೋಪ: 2 ಆನ್‌ ಲೈನ್ ಪಾವತಿ ಸಂಸ್ಥೆಗಳಿಗೆ ತಲಾ 1 ಕೋಟಿ ರೂ. ದಂಡ‌

Update: 2021-12-23 16:41 GMT
photo:PTI

ಮುಂಬೈ,ಡಿ.23: ಕಾನೂನು ನಿಯಮಗಳ ಅನುಸರಣೆಯಲ್ಲಿನ ನ್ಯೂನತೆಗಳಿಗಾಗಿ ಆನ್ಲೈನ್ ಹಣಪಾವತಿ ನಿರ್ವಾಹಕ ಸಂಸ್ಥೆಗಳಾದ ಓನ್ ಮೊಬಿಕ್‌ವಿಕ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಹಾಗೂ ಸ್ಪೈಸ್ ಮನಿ ಲಿಮಿಟೆಡ್ ಸಂಸ್ಥೆಗಳಿಗೆ ತಲಾ 1 ಕೋಟಿ ರೂ. ದಂಡ ವಿಧಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ತಿಳಿಸಿದೆ.

ಭಾರತ್ ಶುಲ್ಕ ಪಾವತಿ ನಿರ್ವಹಣಾ ಘಟಕ (ಬಿಬಿಪಿಓಯು)ಗಳಿಗಾಗಿನ ನಿವ್ವಳ ವೌಲ್ಯದ ಅವಶ್ಯಕತೆ ಕುರಿತು ತಾನು ಜಾರಿಗೊಳಿಸಿದ ನಿರ್ದೇಶನಗಳಿಗೆ ಅನುಸಾರವಾಗಿ ಈ ಎರಡು ಕಂಪೆನಿಗಳು ನಡೆದುಕೊಳ್ಳದೆ ಇರುವುದನ್ನು ತಾನು ಗಮನಿಸಿರುವುದಾಗಿ ಆರ್‌ಬಿಐ ತಿಳಿಸಿದೆ.

2007ರ ಪಾವತಿ ಹಾಗೂ ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಯ ಸೆಕ್ಷನ್‌ನಡಿ ಪ್ರಸ್ತಾವಿಸಲಾದ ಸ್ವರೂಪದ ಅಪರಾಧಗಳು ಇವಾಗಿರುವುದರಿಂದ, ಈ ಎರಡು ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಆದಾಗ್ಯೂ ದಂಡಗಳನ್ನು ವಿಧಿಸಿರುವುದು ಕಾನೂನು ನಿಯಮಗಳ ಅನುಸರಣೆಯ ಉಲ್ಲಂಘನೆಗಾಗಿಯೇ ಹೊರತು, ಈ ಸಂಸ್ಥೆಗಳು ತಮ್ಮ ಗ್ರಾಹಕರೊಂದಿಗೆ ನಡೆಸಿದ ಯಾವುದೇ ವ್ಯವಹಾರ ಅಥವಾ ಒಡಂಬಡಿಕೆಯ ಸಿಂಧುತ್ವದ ವಿಚಾರಕ್ಕೆ ಸಂಬಂಧಿಸಿದ್ದಲ್ಲವೆಂದು ಆರ್‌ಬಿಐ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News