ಕರೀನಾ ಕಪೂರ್ ಪುತ್ರನ ಪೂರ್ಣ ಹೆಸರೇನು? ಎಂಬ ಪ್ರಶ್ನೆಯನ್ನು ಪರೀಕ್ಷೆಯಲ್ಲಿ ಕೇಳಿದ ಶಾಲೆಗೆ ನೋಟಿಸ್

Update: 2021-12-25 13:10 GMT

ಖಂಡ್ವಾ: ಬಾಲಿವುಡ್ ದಂಪತಿ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಆವರ ಪುತ್ರನ ಪೂರ್ಣ ಹೆಸರೇನು ಎಂಬ ಪ್ರಶ್ನೆಯನ್ನು ಆರನೇ ತರಗತಿಯ  ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಯಲ್ಲಿ ಸೇರಿಸಿದ್ದ ಮಧ್ಯ ಪ್ರದೇಶದ ಖಂಡ್ವಾ ಎಂಬಲ್ಲಿನ ಖಾಸಗಿ ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

ಆದರೆ ಈ ಪ್ರಶ್ನೆಯು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವ ಒಂದು ಪ್ರಯತ್ನ ಎಂದು ತಿಳಿಯಬೇಕು ಎಂದು ಶಾಲಾಡಳಿತ ಹೇಳಿಕೊಂಡಿದೆ.

ಖಂಡ್ವಾದ  ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲಿನ ಆರನೇ ತರಗತಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಎರಡನೇ ಭಾಗದ ಪ್ರಶ್ನೆ ಪತ್ರಿಕೆಯ ಒಂದು ಪ್ರಶ್ನೆ- "ಕರೀನಾ ಕಪೂರ್ ಖಾನ್ ಮತ್ತು ಸೈಫ್ ಆಲಿ ಖಾನ್ ಪುತ್ರನ ಪೂರ್ಣ ಹೆಸರನ್ನು ಬರೆಯಿರಿ" ಎಂಬುದಾಗಿತ್ತು.

ಈ ಪ್ರಶ್ನೆಗೆ ಸ್ಥಳೀಯ ಶಿಕ್ಷಕ-ರಕ್ಷಕರ ಸಂಘ ಆಕ್ಷೇಪಿಸಿತ್ತಲ್ಲದೆ ಪ್ರಶ್ನೆಪತ್ರಿಕೆಯನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಶಿಕ್ಷಣಾಧಿಕಾರಿ ಸಂಜೀವ್ ಭಲೇರಾವ್, ನೋಟಿಸಿಗೆ ಶಾಲೆ ಪ್ರತಿಕ್ರಿಯಿಸಿದ ನಂತರ ಹಿರಿಯಾಧಿಕಾರಿಗಳ ಸೂಚನೆಯಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News