"ಏಸುಕ್ರಿಸ್ತನ ಸಂದೇಶಗಳನ್ನು ಸ್ಮರಿಸೋಣ": ಕ್ರಿಸ್ಮಸ್ ಶುಭಕೋರಿದ ಪ್ರಧಾನಿ ಮೋದಿ

Update: 2021-12-25 04:54 GMT
ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ಜನರಿಗೆ ಕ್ರಿಸ್ಮಸ್ ಶುಭಾಶಯಗಳನ್ನು ನೀಡಿದ್ದಾರೆ. ಏಸುಕ್ರಿಸ್ತನ ಸಂದೇಶಗಳನ್ನು ಸ್ಮರಿಸೋಣ ಎಂದು ಅವರು ಹೇಳಿದ್ದಾರೆ.

"ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಸೇವೆ, ಅನುಕಂಪ ಹಾಗೂ ವಿನಮ್ರತೆಗೆ ಎಲ್ಲಕ್ಕಿಂತ ಹೆಚ್ಚು ಮಹತ್ವ ನೀಡಿದ ಏಸು ಕ್ರಿಸ್ತ ಅವರ ಜೀವನ ಮತ್ತು ಉದಾತ್ತ  ಸಂದೇಶಗಳನ್ನು ನೆನಪಿಸೋಣ. ಎಲ್ಲರಿಗೂ ಆರೋಗ್ಯ ಮತ್ತು ಸಮೃದ್ಧಿ ದೊರೆಯಲಿ, ಎಲ್ಲೆಡೆಯೂ ಸೌಹಾರ್ದತೆ ನೆಲೆಯೂರಲಿ,'' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News