ರಾಜಕೀಯ ಇನಿಂಗ್ಸ್ ಕುರಿತು ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2021-12-25 11:26 GMT

ಚಂಡಿಗಢ: ಚುನಾವಣಾ ರಾಜಕೀಯಕ್ಕೆ ಸೇರಬಹುದು ಎಂಬ ಊಹಾಪೋಹದ ನಡುವೆ ಶುಕ್ರವಾರ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು "ನನಗೆ ಹಲವಾರು ಪಕ್ಷಗಳಿಂದ ಆಫರ್ ಗಳು ಬರುತ್ತಿವೆ. ಆ ಕುರಿತು ತುಂಬಾ ಬುದ್ದಿವಂತಿಕೆಯಿಂದ ಯೋಚಿಸಬೇಕಾಗಿದೆ''ಎಂದು  ಶನಿವಾರ ಹೇಳಿದ್ದಾರೆ.

2011 ರ 50 ಓವರ್ ಗಳ ವಿಶ್ವಕಪ್ ಗೆಲ್ಲಲು ಭಾರತಕ್ಕೆ ಸಹಾಯ ಮಾಡಿದ್ದ ಆಫ್-ಸ್ಪಿನ್ನರ್ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು ಹಾಗೂ ತನ್ನ  ಭವಿಷ್ಯದ (ಕ್ರಿಕೆಟ್ ನಂತರದ) ಯೋಜನೆಗಳ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದರು.

"ಭವಿಷ್ಯದ ಯೋಜನೆಯ ಕುರಿತಾಗಿ  ನಾನು ಇನ್ನೂ ನಿರ್ಧರಿಸಿಲ್ಲ. ನಾನು ಕ್ರಿಕೆಟ್‌ನೊಂದಿಗೆ ಸಂಪರ್ಕದಲ್ಲಿರುತ್ತೇನೆ .... ನನ್ನ ರಾಜಕೀಯ ವೃತ್ತಿಜೀವನದ ಕುರಿತು... ಅದು ಸಂಭವಿಸಿದಾಗ, ನಾನು ಎಲ್ಲರಿಗೂ ತಿಳಿಸುತ್ತೇನೆ. ನಿಜ ಹೇಳಬೇಕೆಂದರೆ, ನಾನು ಅದರ ಬಗ್ಗೆ ಯೋಚಿಸಿಲ್ಲ. ನನಗೆ ರಾಜಕೀಯ ಸೇರಲು ವಿವಿಧ ಪಕ್ಷಗಳಿಂದ ಆಫರ್‌ಗಳಿವೆ ... ಆದರೆ ನಾನು ತುಂಬಾ ಬುದ್ಧಿವಂತಿಕೆಯಿಂದ ಕುಳಿತು ಯೋಚಿಸಬೇಕಾಗಿದೆ. ಇದು ಬೇಡಿಕೆಯ ಕೆಲಸವಾದ್ದರಿಂದ ಇದು ಸಣ್ಣ ನಿರ್ಧಾರವಾಗುವುದಿಲ್ಲ. ನಾನು ಅರೆಮನಸ್ಸಿನಿಂದ ಅದನ್ನು ಮಾಡಲು ಬಯಸುವುದಿಲ್ಲ. ನಾನು ಅದನ್ನು ಮಾಡಲು ಸಿದ್ಧನಿದ್ದೇನೆ ಎಂದು ನಾನು ಭಾವಿಸುವ ದಿನ  ಅದಕ್ಕೆ ಹೋಗುತ್ತೇನೆ" ಎಂದು ಹರ್ಭಜನ್ ಹೇಳಿದರು.

ಈ ತಿಂಗಳ ಆರಂಭದಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ  ಸಹ ಮಾಜಿ ಕ್ರಿಕೆಟಿಗ ನವಜೋತ್ ಸಿಧು ರಹಸ್ಯ ಟಿಪ್ಪಣಿಯೊಂದಿಗೆ ಇಬ್ಬರ ಫೋಟೋವನ್ನು ಪೋಸ್ಟ್ ಮಾಡಿದ ನಂತರ ಹರ್ಭಜನ್ ಸಿಂಗ್ ಅವರ ಮುಂದಿನ ಇನ್ನಿಂಗ್ಸ್ ಕುರಿತು ಊಹಾಪೋಹಗಳು ಗರಿಗೆದರಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News