ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಡೆಸ್ಮಂಡ್ ಟುಟು ನಿಧನ
Update: 2021-12-26 13:13 IST
ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಐಕಾನ್, ದೇಶದ ನೈತಿಕ ದಿಕ್ಸೂಚಿ ಎಂದು ಬಣ್ಣಿಸಲಾದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರು 90 ನೇ ವಯಸ್ಸಿನಲ್ಲಿ ಕೇಪ್ ಟೌನ್‌ನಲ್ಲಿ ರವಿವಾರ ನಿಧನರಾದರು ಎಂದು ಅಧ್ಯಕ್ಷ ಸಿರಿಲ್ ರಮಾಫೋಸಾ ಹೇಳಿದ್ದಾರೆ.
ದಣಿವರಿಯದ ಸಾಮಾಜಿಕ ಹೋರಾಟಗಾರ ತಮ್ಮ ದೇಶದಲ್ಲಿ ಬಿಳಿ ಅಲ್ಪಸಂಖ್ಯಾತರ ಆಳ್ವಿಕೆಯನ್ನು ಎದುರಿಸಿದ್ದಕ್ಕಾಗಿ 1984 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದರು.
ನೇರ ನಡೆ ನುಡಿಯ ಟುಟು ಜನಾಂಗೀಯ ವರ್ಣಭೇದ ನೀತಿಯ ಅಂತ್ಯವಾದ ನಂತರವೂ ದಕ್ಷಿಣ ಆಫ್ರಿಕಾದ ವೈಫಲ್ಯಗಳು ಅಥವಾ ಅನ್ಯಾಯಗಳನ್ನು ಟೀಕಿಸುವುದರಿಂದ ಎಂದಿಗೂ ದೂರ ಸರಿಯಲಿಲ್ಲ.