×
Ad

ಸಲ್ಮಾನ್ ಖಾನ್ ಗೆ ಹಾವು ಕಡಿತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್

Update: 2021-12-26 14:41 IST

ಮುಂಬೈ: ಸಲ್ಮಾನ್ ಖಾನ್ ಅವರಿಗೆ  ರವಿವಾರ ಮುಂಜಾನೆ ಪನ್ವೇಲ್ ನಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಹಾವು ಕಚ್ಚಿದೆ. ಅವರನ್ನು ಮುಂಬೈನ ಕಾಮೋಥೆ ಆಸ್ಪತ್ರೆಗೆ ಸಾಗಿಸಲಾಯಿತು. ಅವರಿಗೆ ವಿಷವಿಲ್ಲದ ಹಾವು ಕಚ್ಚಿದೆ ಎಂದು ವರದಿಯಾಗಿದೆ. ಚಿಕಿತ್ಸೆ ಪಡೆದ ನಂತರ ಸಲ್ಮಾನ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಬಾಂಗ್ ನಟ ಈಗ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

ಡಿಸೆಂಬರ್ 27ಕ್ಕೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಪ್ರಸ್ತುತ ತಮ್ಮ ಫಾರ್ಮ್‌ಹೌಸ್‌ನಲ್ಲಿದ್ದಾರೆ. ವಾಯುವಿಹಾರದ ಹೊರಗಿನ ಉದ್ಯಾನ ಪ್ರದೇಶದಲ್ಲಿ ಹಾವು ಕಚ್ಚಿದೆ ಎನ್ನಲಾಗಿದೆ.  ಸಲ್ಮಾನ್ ಅವರ ಫಾರ್ಮ್‌ಹೌಸ್ ದೊಡ್ಡದಾಗಿದೆ ಮತ್ತು  ಅರಣ್ಯ ಭೂಪ್ರದೇಶದಲ್ಲಿದೆ. ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳೊಂದಿಗೆ ಅಪಾರವಾದ ಸಸ್ಯಗಳಿವೆ.

ಘಟನೆ ನಡೆದಾಗ ಸಲ್ಮಾನ್ ಕೆಲವು ಸ್ನೇಹಿತರೊಂದಿಗೆ ಕುಳಿತು ಹರಟೆ ಹೊಡೆಯುತ್ತಿದ್ದರು ಎಂದು IndiaToday.in ಗೆ ಮೂಲವೊಂದು ಬಹಿರಂಗಪಡಿಸಿದೆ. “ಶನಿವಾರ ರಾತ್ರಿ ಅವರು  ಕುಳಿತುಕೊಂಡು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಇದು ಸಂಭವಿಸಿದೆ. ಅವರ ತೋಳಿಗೆ ಹಾವು ಕಚ್ಚಿದೆ.  ಸ್ನೇಹಿತರು ಹಾವನ್ನು ನೋಡಿದ ಬಳಿಕ ಗಾಬರಿಗೊಂಡರು ಮತ್ತು ಸಹಾಯಕ್ಕಾಗಿ ಕೂಗಿದರು”ಎಂದು ಮೂಲಗಳು ತಿಳಿಸಿವೆ.

ಸಲ್ಮಾನ್ ಅವರನ್ನು ಕಾಮೋಥೆ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಸುಮಾರು 6-7 ಗಂಟೆಗಳ ಕಾಲ ಅಲ್ಲಿದ್ದರು. ಅವರು ಚೇತರಿಸಿಕೊಂಡಿದ್ದಾರೆ ಮತ್ತು ಈಗ ಪನ್ವೆಲ್ ಫಾರ್ಮ್‌ಹೌಸ್‌ಗೆ ಮರಳಿದ್ದಾರೆ. ಹಾವು ವಿಷಕಾರಿಯಾಗಿರಲಿಲ್ಲ.  ಸಲ್ಮಾನ್ ಆರೋಗ್ಯವಾಗಿದ್ದಾರೆ ಎಂದು ನಟನಿಗೆ ಹತ್ತಿರವಿರುವ ಮೂಲವೊಂದು 'IndiaToday.in ಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News