×
Ad

ಗೋವಾದಲ್ಲಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ: ಚಿದಂಬರಂ

Update: 2021-12-26 15:23 IST

ಹೊಸದಿಲ್ಲಿ: ಟಿಎಂಸಿ ಮತ್ತು ಎಎಪಿ ಗೋವಾದಲ್ಲಿ ಬಿಜೆಪಿಯೇತರ ಮತಗಳನ್ನು ವಿಭಜಿಸುತ್ತಿವೆ ಎಂದು ರವಿವಾರ ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ತಮ್ಮ ಪಕ್ಷಕ್ಕೆ ಮಾತ್ರ ಇದೆ ಎಂದು ಪ್ರತಿಪಾದಿಸಿದರು.

ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಹಿರಿಯ ಚುನಾವಣಾ ವೀಕ್ಷಕರಾಗಿರುವ ಚಿದಂಬರಂ, ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷ ಹಾಗೂ  ಮತದಾರರಿಗೆ ನಿಷ್ಠೆಯೇ ಮೊದಲ ಮಾನದಂಡವಾಗಿದೆ. ಆಯ್ಕೆಯಾದಾಗ ಅವರು  ಪಕ್ಷ ಹಾಗೂ ಮತದಾರರು ಎರಡಕ್ಕೂ ನಿಷ್ಠರಾಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರು ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಚಿದಂಬರಂ ಹೇಳಿಕೆಗಳು ಬಂದಿದ್ದು, ಲೌರೆನ್ಕೊ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News