ಮಹಾರಾಷ್ಟ್ರ: 52 ವಿದ್ಯಾರ್ಥಿಗಳಿಗೆ ಕೋವಿಡ್‌ ಸೋಂಕು ಪತ್ತೆ; ಶಾಲೆ ಮುಚ್ಚುಗಡೆ

Update: 2021-12-26 12:21 GMT
ಸಾಂದರ್ಭಿಕ ಚಿತ್ರ

ಅಹ್ಮದ್‌ ನಗರ, ಮಹಾರಾಷ್ಟ್ರ: ಮಹಾರಾಷ್ಟ್ರದ ಜವಾಹರ್ ನವೋದಯ ವಿಶ್ವವಿದ್ಯಾನಿಲಯದಲ್ಲಿ 19 ಮಕ್ಕಳಿಗೆ ಕೋವಿಡ್ -19 ಸೋಂಕು ತಗುಲಿರುವುದು ಪತ್ತೆಯಾಗಿದ್ದು, 450 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಇನ್ನೂ 33 ಮಕ್ಕಳಲ್ಲೂ ಕೋವಿಡ್‌ ಸೋಂಕು ಪತ್ತೆಯಾಗಿದೆ ಎಂದು ndtv.com ವರದಿ ಮಾಡಿದೆ.

ಶಾಲೆಯಲ್ಲಿ ಒಟ್ಟು 52 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಶಾಲೆಯನ್ನು ಸೀಲ್ ಮಾಡಲಾಗಿದೆ ಮತ್ತು ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಈ ಶಾಲೆಯು ರಾಜ್ಯದ ಅಹಮದ್‌ನಗರ ಜಿಲ್ಲೆಯ ತಕ್ಲಿ ಧೋಕೇಶ್ವರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News