15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ : ಕೋವಿನ್ ವೆಬ್‌ಸೈಟ್ ನಲ್ಲಿ ಜನವರಿ 1ರಿಂದ ನೋಂದಣಿ
Update: 2021-12-27 14:15 IST
ಹೊಸದಿಲ್ಲಿ: ಹದಿನೈದರಿಂದ 18 ವರ್ಷ ಪ್ರಾಯದೊಳಗಿನ ಮಕ್ಕಳು ಕೋವಿಡ್ ಲಸಿಕೆ ಪಡೆಯಲು ಕೋವಿನ್ ಪೋರ್ಟಲ್‍ನಲ್ಲಿ ಜನವರಿ 1ರಿಂದ ನೋಂದಣಿ ಮಾಡಬಹುದಾಗಿದೆ ಎಂದು ಕೋವಿನ್ ಪೋರ್ಟಲ್ ನಿರ್ವಹಿಸುವ ಸರಕಾರದ ಸಮಿತಿಯ ಅಧ್ಯಕ್ಷರಾದ ಆರ್ ಎಸ್ ಶರ್ಮ ಹೇಳಿದ್ದಾರೆ.
ಕೆಲವು ಮಕ್ಕಳ ಬಳಿ ಆಧಾರ್ ಕಾರ್ಡ್ ಇಲ್ಲದೇ ಇರುವುದರಿಂದ ಅಂತಹವರು ತಮ್ಮ ಶಾಲಾ ಐಡಿಗಳನ್ನು ಬಳಸಿ ಲಸಿಕೆ ಪಡೆಯಲು ನೋಂದಣಿ ಮಾಡಬಹುದಾಗಿದೆ.
ದೇಶದ ಲಸಿಕಾ ಕಾರ್ಯಕ್ರಮವನ್ನು 15ರಿಂದ 18 ವರ್ಷದೊಳಗಿನ ಮಕ್ಕಳಿಗೂ ಜನವರಿ 3ರಿಂದ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದರು.
ಶನಿವಾರವಷ್ಟೇ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡಲು ತುರ್ತು ಅನುಮೋದನೆಯನ್ನು ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ ಒದಗಿಸಿತ್ತು.
ಆಗಸ್ಟ್ 20ರಂದು ಝೈಡಸ್ ಕ್ಯಾಡಿಲಾ ಸಂಸ್ಥೆಯ ನೀಡ್ಲ್-ಫ್ರೀ ಲಸಿಕೆ Zಥಿಅoಗಿ-ಆ ಗೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ ಅನುಮತಿ ನೀಡಿತ್ತು.