ಜಮ್ಮುಕಾಶ್ಮೀರ: ಸಿಆರ್‌ಪಿಎಫ್ ಬಂಕರ್ ಮೇಲೆ ಶಂಕಿತ ಉಗ್ರರಿಂದ ಗ್ರೆನೇಡ್ ದಾಳಿ
Update: 2021-12-27 21:19 IST
ಶ್ರೀನಗರ, ಡಿ. 27: ಜಮ್ಮು ಹಾಗೂ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಕೇಂದ್ರ ಮೀಸಲು ಪಡೆಯ (ಸಿಆರ್ಪಿಎಫ್) ಬಂಕರ್ ಮೇಲೆ ಶಂಕಿತ ಉಗ್ರರು ಸೋಮವಾರ ಗ್ರೆನೇಡ್ ದಾಳಿ ನಡೆಸಿದ್ದಾರೆ. ಬಿಜ್ ಬೆಹ್ರಾ ಮಾರ್ಕೆಟ್ ನಲ್ಲಿರುವ ಬಂಕರ್ ಮೇಲೆ ಇಂದು ಅಪರಾಹ್ನ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೆನೇಡ್ ಗುರಿ ತಪ್ಪಿದೆ. ಆದುದರಿಂದ ರಸ್ತೆಯಲ್ಲೇ ಸ್ಫೋಟಗೊಂಡಿದೆ. ಇದರಿಂದ ಯಾವುದೇ ಹಾನಿ ಉಂಟಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಪ್ರದೇಶವನ್ನು ಸುತ್ತುವರಿಯಲಾಗಿದೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಲಾಗಿದೆ ಎಂದು ಅವರು ತಿಳಿಸಿದಾರೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.