10,000 ಕೋಟಿ ಡಾಲರ್ ಗಡಿ ದಾಟಿದ ಭಾರತ-ಚೀನಾ ವ್ಯಾಪಾರ: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

Update: 2021-12-29 15:18 GMT

ಹೊಸದಿಲ್ಲಿ,ಡಿ.29: ಮಿಲಿಟರಿ ಬಿಕ್ಕಟ್ಟಿನ ಹೊರತಾಗಿಯೂ ಭಾರತ ಮತ್ತು ಚೀನಾ ನಡುವಿನ ವ್ಯಾಪಾರವು 10,000 ಕೋಟಿ ಡಾಲರ್ ಗಡಿಯನ್ನು ದಾಟಿರುವುದಕ್ಕಾಗಿ ಬುಧವಾರ ಕೇಂದ್ರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಪ್ರಸಕ್ತ ಆಡಳಿತವು ಅಧಿಕಾರದಿಂದ ಕೆಳಗಿಳಿಯುವುದನ್ನೇ ದೇಶವು ಕಾಯುತ್ತಿದೆ ಎಂದು ಹೇಳಿದ್ದಾರೆ.

‘ಇದು ಬಡಾಯಿ ಕೊಚ್ಚಿಕೊಳ್ಳುವ ಸರಕಾರವಾಗಿದೆ,ಸುಳ್ಳಿನ ಸೋಗು ಅಪಾರವಾಗಿದೆ. ಈ ಸರಕಾರವು ಗಂಟುಮೂಟೆ ಕಟ್ಟುವುದನ್ನು ದೇಶವು ಈಗ ಕಾಯುತ್ತಿದೆ ’ಎಂದು ಅವರು ಟ್ವೀಟಿಸಿದ್ದಾರೆ. ಚೀನಿ ಅತಿಕ್ರಮಣದ ಬಳಿಕ ಅದರೊಂದಿಗೆ ಭಾರತದ ವ್ಯಾಪಾರವನ್ನು ಟೀಕಿಸಿ ರಾಹುಲ್ ಟ್ವೀಟಿಸಿದ್ದಾರೆ.

ಚೀನಿ ಆ್ಯಪ್‌ಗಳನ್ನು ಸರಕಾರವು ನಿಷೇಧಿಸಿದೆ. ಮೇಡ್ -ಇನ್-ಚೈನಾ ಸರಕುಗಳನ್ನು ಪದೇಪದೇ ಬಹಿಷ್ಕರಿಸಲಾಗುತ್ತಿದೆ. ಇವುಗಳ ನಡುವೆಯೇ ನವಂಬರ್ ವೇಳೆಗೆ ಭಾರತ ಮತ್ತು ಚೀನಾ ನಡುವಿನ ವ್ಯಾಪಾರ 10,000 ಕೋಟಿ ಡಾಲರ್ ಗಳ ದಾಖಲೆಯ ಎತ್ತರವನ್ನು ತಲುಪಿದೆ ಎಂದು ಚೀನಾದ ಸರಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ಅಲ್ಲಿಯ ಕಸ್ಟಮ್ಸ್ ಇಲಾಖೆಯ ಅಂಕಿಅಂಶಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News